ಜಿ-೨೦ ರಲ್ಲಿ ನಾಯಕತ್ವ ವಿಜೃಂಭಣೆ: ತರೂರ್ ಟೀಕೆ

ನವದೆಹಲಿ,ಸೆ.೧೧-ಭಾರತ ಅನೇಕ ಶೃಂಗಸಭೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಿದೆ ಆದರೆ ಎಂದೂ ಕೂಡ ಆಡಳಿತ ಪಕ್ಷ ತನ್ನ ನಾಯಕತ್ವ ವಿಜೃಂಭಿಸಿಕೊಳ್ಳಲು ಈ ರೀತಿಯಲ್ಲಿ ಶೃಂಗಸಭೆಯನ್ನು ಬಳಸಿಕೊಂಡಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಆಕ್ರೋಶ ಹೊರಹಾಕಿದ್ದಾರೆ.
ಜಿ-೨೦ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ವಿಜೃಂಭಿಸಲು ಹೆಚ್ಚಾಗಿ ಬಳಸಿಕೊಂಡಿದ್ದಾರೆಯೇ ವಿನಹಃ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿಲ್ಲ ಎಂದು ಹರಿಹಾಯ್ದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜಿ-೨೦ ಶೃಂಗಸಭೆಯನ್ನು ಆಡಳಿತಾರೂಢ ಬಿಜೆಪಿ ತನ್ನ ಸಾಧನಾವಾಗಿಸಲು ರಾಜಕೀಯವಾಗಿ ಬಳಸಿಕೊಂಡಿದೆ ಎಂದು ದೂರಿದ್ದಾರೆ.
ಜಿ-೨೦ ಶೃಂಗಸಭೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು “ಸರ್ಕಾರದ ನಡವಳಿಕೆಯ ಬಗ್ಗೆ ಬೇಸರ ಹೊರಹಾಕಿದ್ದು ತಮ್ಮ ನಾಯಕತ್ವ ಬಿಂಬಿಸಿಕೊಳ್ಳಲು ನಡೆಸಿದ ಸಭೆ ಇದು ಎಂದು ಟೀಕಿಸಿದ್ದಾರೆ.
ದೇಶಾದ್ಯಂತ ರಾಷ್ಟ್ರವ್ಯಾಪಿ ೫೮ ನಗರಗಳಲ್ಲಿ ೨೦೦ ಸಭೆಗಳನ್ನು ನಡೆಸಲಾಯಿತು. ಸಾರ್ವಜನಿಕ ಕಾರ್ಯಕ್ರಮಗಳೊಂದಿಗೆ ಜಿ-೨೦ ಶೃಂಗಸಭೆಯನ್ನು ಅರ್ಥಪೂರ್ಣವಾಗಿಸಬಹುದಿತ್ತು. ಆದರೆ ಆ ಕೆಲಸ ಮಾಡದೆ ತಮ್ಮನ್ನು ವೈಭವಿಕರಿಸಲು ಒತ್ತು ನೀಡಿದ್ದಾರೆ ಎಂದು ದೂರಿದ್ದಾರೆ.