ಜಿ.ಸುರೇಶ್ ರಿಂದ ಸಮಾಜ ಒಡೆಯುವ ಕೆಲಸ – ಬಿ.ವಿರೂಪಾಕ್ಷಪ್ಪ ಆರೋಪ

ರಾಯಚೂರು,ಜು.೧೮- ಜಿಲ್ಲಾ ಮಡಿವಾಳ ಸಮಾಜದ ಮಾಜಿ ಅಧ್ಯಕ್ಷರಾದ ಜಿ.ಸುರೇಶ್ ಅವರು ನಾನೇ ಅಧ್ಯಕ್ಷ ಎಂದು ಹೇಳುತ್ತಿರುವುದು ಖಂಡನೀಯ ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಮಾಜಿ ಅಧ್ಯಕ್ಷ ಜಿ.ಸುರೇಶ ಈಗಲೂ ನಾನೇ ಅಧ್ಯಕ್ಷನೆಂದು ಸಮಾಜದ ಸಮುದಾಯ ಭವನಕ್ಕೆ ಬೀಗ ಹಾಕಿ ಸಮಾಜದ ಜನರಿಗೆ ಸ ಸಮಾರಂಭ ಇನ್ನಿತರ ಚಟುವಟಿಕೆಗಳನ್ನು ಮಾಡಲು ಅವಕಾಶ ನೀಡದೇ ಸಮಾಜದ ಜನರಿಗೆ ತೊಂದರೆ ನೀಡಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮುದಾಯ ಭವನದ ಇನ್ನುಳಿದ ಕಾಮಗಾರಿಯನ್ನು ಮಾಡಬೇಕಾಗಿದೆ. ಸಮುದಾಯ ಭವನಕ್ಕೆ ಬೀಗ ಹಾಕಿದ ಕಾರಣ ಕಟ್ಟಡದ ಕಾಮಗಾರಿ ನಿಂತು ಹೋಗಿದೆ. ಮಳೆಗಾಲ ಇರುವುದರಿಂದ ಸಮುದಾಯ ಭವನಕ್ಕೆ ಏನಾದರೂ ಅನಾಹುತವಾದಲ್ಲಿ ಇದಕ್ಕೆ ಜಿ.ಸುರೇಶ್ ಅವರೇ ಕಾರಣ ಎಂದರು.
ದಿ. ೨೩-೦೧-೨೦೨೧ ರಂದು ಸಮುದಾಯ ಭವನದಲ್ಲಿ ನೂತನ ಅಧ್ಯಕ್ಷರ ನೇಮಕ ಕುರಿತು ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಜಿ.ಸುರೇಶ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.ಅಂದಿನ ಸಭೆಯಲ್ಲಿ ಜಿ . ಸುರೇಶರವರ ಅಧ್ಯಕ್ಷರ ಅವಧಿ ಮುಗಿದ ಕಾರಣ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಮಿತಿಯನ್ನು ಸಭೆಯಲ್ಲಿ ವಿಸರ್ಜಿಸಲಾಯಿತು.ಈ ವಿಷಯ ಗೊತ್ತಿದ್ದು ಸಮಾಜದ ನಿರ್ಣಯದ ವಿರುದ್ಧ ನಾನು ಅಧ್ಯಕ್ಷನೆಂದು ಹೇಳಿಕೊಂಡು ಸಮಾಜದ ಸಮುದಾಯ ಭವನಕ್ಕೆ ಬೀಗ ಹಾಕಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಜಿ . ಸುರೇಶರವರು ಬಿ.ವಿರುಪಾಕ್ಷಪ್ಪ ಅಧ್ಯಕ್ಷರೆಂದು ಘೋಷಣೆ ಮಾಡಿ ಠರಾವಿನ ಪುಸ್ತಕದಲ್ಲಿ ಸಹಿ ಮಾಡಿದ ಮಹತ್ವ ಆರಿಯದ ಇವರು ಅಧ್ಯಕ್ಷರೆಂದು ಹೇಳಿಕೊಳ್ಳುವುದು ದುರಾದೃಷ್ಟಕರವಾಗಿದೆ. ಸಮಾಜದ ಸರ್ವ ಸದಸ್ಯರ ಸಭೆಯ ತೀರ್ಮಾನವೇ ಅಂತಿಮ ಸಮಾಜಕ್ಕಿಂತ ಯಾರೂ ದೊಡ್ಡವರಲ್ಲ. ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ದಿ. ೨೩-೦೧-೨೦೨೧ ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬಿ .ಪಾಕ್ಷಪ್ಪ ಅವರನ್ನು ೦೩ ವರ್ಷದ ಅವಧಿಗೆ ಅಧ್ಯಕ್ಷರೆಂದು ಅದರಂತೆ ಬಿ. ವಿರುಪಾಕ್ಷಪ್ಪರವರು ಸಮಾಜದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದೇನೆ ಸಮಾಜದ ಯಾವುದೇ ಭಿನ್ನಾಭಿಪ್ರಾಯಗಳು ಇದ್ದಾರೆ ಅದನ್ನು ಸಮಾಜದ ಚೌಕಟ್ಟಿನಲ್ಲಿ ಮತ್ತು ಹಿರಿಯರ ಸಮಕ್ಷಮದಲ್ಲಿ ಇತ್ಯರ್ಥ ಮಾಡಿಕೊಂಡು ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಜಿ ಅಮರೇಶ್, ಬಿ.ಶಿವಶಂಕರ್,ಶಶಿಧರ್ ಏಗನೂರು, ಬಿ.ಚಂದಪೂರ್ ಮಹಿಳಾ ಇದ್ದರು.