ಜಿ.ಶಿವಮ್ಮ ಇನ್ನಿಲ್ಲ

ಸಂಡೂರು:ಜ:14.ಕೃಷಿಪತ್ತಿನ ಸಹಕಾರಿ ಸಂಘದ ಸದಸ್ಯರು, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರು, ಎಸ್.ಪಿ.ಎಸ್. ಬ್ಯಾಂಕಿನ ಹಾಲಿ ನಿರ್ದೇಶಕರಾದ ಜಿ.ವೀರೇಶ್ ಇವರ ತಾಯಿ ಜಿ.ಶಿವಮ್ಮ (80) ಅನಾರೋಗ್ಯದಿಂದ ಬಳಲಿ ಬಸವಾದಿ ಶರಣರ ಪಾದ ಸೇರಿದರು. ಮೃತರಿಗೆ ಒರ್ವ ಪುತ್ರ, ಪುತ್ರಿ, ಸೊಸೆ, ಮೊಮ್ಮಕ್ಕಳು, ಇವರನ್ನು ಅಗಲಿದ್ದಾರೆ. ಮೃತರ ಅಂತ್ಯೆ ಕ್ರಿಯೆ ವಿರಕ್ತಮಠದ ಬಳಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.
ಕಸಾಪ ಮತ್ತು ಶಾಸಪ ಅಧ್ಯಕ್ಷರಾದ ಬಿ.ನಾಗನಗೌಡರು, ಮರಾಠ ಸಮಾಜ ಹಾಲಿ ಅಧ್ಯಕ್ಷ ಮಾರುತಿರಾವ್ ಬೋಸ್ಲೆ, ಸಂತಾಪ ಸೂಚಿಸಿದರು.