ಜಿ.ವೆಂಕಟಸುಬ್ಬಯ್ಯ ನಿಧನಕ್ಕೆ ಸಚಿವ ಶೆಟ್ಟರ್‌ ಸಂತಾಪ

ಬೆಂಗಳೂರು.ಏ. 19: ಖ್ಯಾತ ಸಂಶೋಧಕ, ನಿಘಂಟು ತಜ್ಞ, ನಾಡೋಜ, ಪದ್ಮಶ್ರೀ ಪ್ರೋ ಜಿ ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೋ ಜಿ.ವಿ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಉಪ ಪ್ರಧಾನಿ ಅಡ್ವಾಣಿ ಜೀ ಅವರೊಂದಿಗೆ ಭಾಗಿಯಾಗಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ‌

ನಾಡಿನ ನಾಡು ಹಾಗು ನುಡಿಗೆ ಪ್ರೋ ಜಿ ವಿ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇಗೋ ಕನ್ನಡ ಅಂಕಣದ ಮೂಲಕ ಕನ್ನಡದ ಪದಗಳ ಅರ್ಥಗಳನ್ನು ತಿಳಿಸುವ ಅವರ ಕಾರ್ಯದಿಂದ ಮನೆಮಾತಾಗಿದ್ದರು. ಭಾಷೆ ಮೇಲಿನ ಇವರ ಪಾಂಡಿತ್ಯಕ್ಕೆ ಯಾರು ಸರಿಸಾಟಿಯಲ್ಲ. ಇಂತಹ ಮೇಧಾವಿಯ ಅಗಲಿಕೆ ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಇವರ ಅಗಲಿಕೆಯ ನೋವನ್ನು ಅವರ ಕುಟುಂಬದವರಿಗೆ ಆ ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ತೇಜಸ್ವಿನಿ ಸಂತಾಪ:

ನಾಡಿನ ಹಿರಿಯ ʼಜೀವಿʼ ಯಾಗಿದ್ದ ಪ್ರೊ. ಜಿ ವೆಂಕಟಸುಬ್ಬಯ್ಯ ಅವರ ಜೊತೆಗಿನ ಒಡನಾಟ ಚಿರಸ್ಮರಣೀಯ. ಅಂತಹ ಮೇಧಾವಿಯ ಶತಮಾನೋತ್ಸವ ಕಾರ್ಯಕ್ರಮ ಸಮಿತಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಹೇಳಿದ್ದಾರೆ

ನಾಡಿನ ಹಿರಿಯ ಚೇತನದ ಅಗಲಿಕೆಯ ಬಗ್ಗೆ ತೀವ್ರ ದುಖಃ ವ್ಯಕ್ತಪಡಿಸಿ ಅವರು, ಪ್ರೊ. ಜೀ.ವಿ ಅವರೊಂದಿಗೆ ಇದ್ದ ತಮ್ಮ ಒಡನಾಟವನ್ನು ಮೆಲಕು ಹಾಕಿದ್ದಾರೆ.

ಇಂತಹ ಮಹಾನ್‌ ಚೇತನ ದ ಅಗಲಿಕೆಯಿಂದ ನಾಡಿನ ಸಾಂಸ್ಕೃತಿಕ ಜಗತ್ತಿಗೆ ಬಹಳ ನಷ್ಟ ಆಗಿದೆ. ಇಗೋ ಕನ್ನಡದ ಮೂಲಕ ಕನ್ನಡ ಶಬ್ದಗಳ ಅರ್ಥ ಸಂಪತ್ತನ್ನು ನಾಡಿಗೆ ತಲುಪಿಸಿದ ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.