ಜಿ.ವೆಂಕಟಸುಬ್ಬಯ್ಯ ನಿಧನಕ್ಕೆ ಶೃತಿ ಸಾಹಿತ್ಯ ಮೇಳದಿಂದ ಸಂತಾಪ

ರಾಯಚೂರು.ಏ.೧೯-ಕನ್ನಡ ಸಾರಸತ್ವ ಲೋಕದ ಹಿರಿಯ ಸಾಧಕ ಮತ್ತು ಕನ್ನಡ ನಿಘಂಟು ತಜ್ಞ, ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ಸಾಹಿತಿಕ ಸಂಘಟನೆ ಶ್ರುತಿ ಸಾಹಿತ್ಯ ಮೇಳ ರಾಯಚೂರು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ್ ಕುಲಕರ್ಣಿ ಸಂತಾಪ ಸೂಚಿಸಿ, ಕನ್ನಡ ಬೆಳವಣಿಗೆ ಶ್ರಮಿಸಿದ ಹಿರಿಯ ಮುತ್ಸದಿ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ, ಹಳೆ ಕನ್ನಡ ಸಾಹಿತ್ಯ ಸಂಶೋಧನೆ, ಅನುವಾದ ಸಾಹಿತ್ಯ, ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿರಿಯ ಜೀವಿ ,ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ ಕನ್ನಡ ಸಾಹಿತ್ಯದ ಬಹುದೊಡ್ಡ ಆಸ್ತಿ ಇವರ ನಿಧನದಿಂದ ಕನ್ನಡ ಸಾರಸತ್ವ ಲೋಕ ಬಡವಾಗಿದೆ ಎಂದು ಮುರಳಿಧರ ಕುಲಕರ್ಣಿಯವರು ಸಂತಾಪ ಸೂಚಿಸಿದ್ದಾರೆ.
ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಅವರು ಸಂತಾಪ ಸೂಚಿಸಿ ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ ದೀರ್ಘಕಾಲ ಅಂದರೆ೧೦೭ ವರ್ಷಗಳ ಕಾಲ ತುಂಬ ಜೀವನವನ್ನು ನಡೆಸಿ ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಕನ್ನಡದ ಕಟ್ಟಾಳು, ಹಾಗೂ ಇವರೊಬ್ಬ ಅತ್ಯುತ್ತಮ ಅಂಕಣಕಾರರಾಗಿ ಹಲವಾರು ಮೌಲ್ಯಯುಕ್ತ ಮತ್ತು ಉಪಯುಕ್ತ ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ನಾಡೋಜ ಪ್ರಶಸ್ತಿ ಪಂಪ ಪ್ರಶಸ್ತಿ ಮತ್ತು ಡಾಕ್ಟರೇಟ್ ಪ್ರಶಸ್ತಿ ದೊರೆತಿದೆ. ಇವರು ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದಾರೆ.
ಅದೇ ರೀತಿ ಶೃತಿ ಸಾಹಿತ್ಯ ಮೇಳದ ಪದಾಧಿಕಾರಿಗಳಾದ ರಮೇಶ್ ಕುಲಕರ್ಣಿ, ಜೆ.ಎಂ ವೀರೇಶ, ವಸುದೇಂದ್ರ ಸಿರವಾರ್ ಎಚ್‌ಐವಿ ಕಲ್ಯಾಣರಾವ್, ವಿಜಯಲಕ್ಷ್ಮಿ ಸೇಡಂ ಕರ, ಮೀರಾ ಕೋನಾಪೂರ್, ಯಶೋದ ವೈಕೆ ,ಶ್ರೀಪಾದ ದಾಸ, ಗೋಪಾಲ್ ಗುಡಿಬಂಡೆ ಮುಂತಾದವರು ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.