“ಜಿ.ವಿ.ಪಿ.ಪಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎರಡು ಱ್ಯಾಂಕ್ “

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಸೆ.14 ಪಟ್ಟಣದ ಗಂಭೀ ಪದವಿ ಕಾಲೇಜ್‍ನ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ನಡೆದ ಪದವಿ ಪರೀಕ್ಷೆಗಳ ಬಿ.ಎಸ್ಸಿ ವಿಭಾಗದಲ್ಲಿ ಕಾಲೇಜಿನ ಕುಮಾರಿ  ಸಮಾಳದ ಪರಿಮಳ ಇವರು ಪ್ರಥಮ ಱ್ಯಾಂಕ್ ಮತ್ತು ಬಿ.ಕಾಂ ಪದವಿಯಲ್ಲಿ ಕುಮಾರಿ ಸಹನಾ.ಹೆಚ್.ಎಂ ಇವರು  ಒಂಭತ್ತನೇ ಱ್ಯಾಂಕ್ ಪಡೆಯುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಸತೀಶ್‍ಪಾಟೀಲರವರು ತಿಳಿಸಿದರು.
ಇವರ ಸಾಧನೆಗೆ ಬೋಧಕ ಸಿಬ್ಬಂದಿಗಳು, ಬೋಧಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು  ಅಭಿನಂದನೆ ಸಲ್ಲಿಸಿರುತ್ತಾರೆ.