ಜಿ.ಲೋಕರೇಡ್ಡಿ ನಿವಾಸಕ್ಕೆ ಬಿ.ವಿ.ನಾಯಕ ಭೇಟಿ: ಬೆಂಬಲಿಸುವಂತೆ ಮನವಿ

ಸಿರವಾರ,ಏ.೨೧- ಜೆಡಿಎಸ್ ಹಿರಿಯ ಮುಖಂಡ ಹಾಗೂ ವಾಣಿಜ್ಯೋದ್ಯಮಿ ಜಿ.ಲೋಕರೇಡ್ಡಿ ನಿವಾಸಕ್ಕೆ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ವಿ.ನಾಯಕ ಭೇಟಿ ನೀಡಿ ಬೆಂಬಲಿಸುವಂತೆ ಕೋರಿದ್ದಾರೆ. ಪಟ್ಟಣದ ಜಿ.ಲೋಕರೇಡ್ಡಿ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿಯಾಗಿ ಅವರನ್ನು ಸನ್ಮಾನಿಸಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನನಗೆ ಟಿಕೆಟ್ ನೀಡಿದೆ, ಎಲ್ಲಾರ ಆಶೀರ್ವಾದ ಕೇಳುತ್ತಿರುವೆ ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೊರಿರುವೆ, ಇದಕ್ಕೆ ಸೂಕ್ತ ರೀತಿಯ ಸ್ಪಂದನೆ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಗಂಗಾಧರ ನಾಯಕ, ಜೆ.ಶರಣಪ್ಪಗೌಡ, ಅಮರೇಶಪ್ಪ ವೈ, ಜೆ.ದೇವರಾಜಗೌಡ, ಉದಯಕುಮಾರ್ ಚಾಗಭಾವಿ, ಶಿವಶರಣ ಗೌಡ ಲಕ್ಕಂದಿನ್ನಿ, ತಾ.ಪಂ ಮಾಜಿ ಅದ್ಯಕ್ಷ ದೇವರಾಜ ನಾಯಕ, ಸಣ್ಣ ಮಹಾಂತೇಶ ಪಾಟೀಲ್, ಗೋಪಾಲ ನಾಯಕ ಸೇರಿದಂತೆ ಇನ್ನಿತರು ಇದ್ದರು.