ಜಿ. ಬಿ. ವಿನಯ್ ಕುಮಾರ್ ಪರ  ರಾಗಿಮಸಾಲವಾಡದಲ್ಲಿ ಬಿರುಸಿನ ಪ್ರಚಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೨೪:  ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಅವರ ಪರವಾಗಿ ದಾವಣಗೆರೆ ನಗರಸಭಾ ಮಾಜಿ ಸದಸ್ಯೆ ಗೀತಾ ಮುರುಗೇಶ್  ನೇತೃತ್ವದಲ್ಲಿ ಸ್ಥಳೀಯ ಮುಖಂಡರು ರಾಗಿಮಸಾಲವಾಡದಲ್ಲಿ ಪ್ರಚಾರ ನಡೆಸಿದರು. ಈ ಬಾರಿ ಸಿಲಿಂಡರ್ ಗುರುತು, ಕ್ರಮ ಸಂಖ್ಯೆ 28 ನೋಡಿಕೊಂಡು ಮತ ನೀಡುವಂತೆ ಮತಯಾಚಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಂಭುಲಿಂಗಪ್ಪ, ಶಿವಕುಮಾರ್, ಚೆನ್ನಪ್ಪ, ದೊಡ್ಡೇಶ್, ನಾಗರಾಜಪ್ಪ, ರಾಜಪ್ಪ, ಹನುಮಂತಪ್ಪ, ದುಗೇಶ್ ದಾವಣಗೆರೆ, ರಮೇಶ್, ನಾಗರಾಜ್, ಸಲ್ಮಾನ್, ಬುಲೆರೋ ಜಯಪ್ಪ. ಗೀತಾ ಬಿ.ವಿ., ಶೈಲಾ ಬಿ.ವಿ., ಗಿರೀಶ್ ಐ. ಎಂ., ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ರಾಗಿ ಮಸಾಲವಾಡ  ಗ್ರಾಮದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು,ವಿನಯ್ ಕುಮಾರ್ ಬಡವರು, ಮಧ್ಯಮ ವರ್ಗದ ಪರ ಕನಸುಗಳನ್ನು ಹೊತ್ತ ಯುವಕ. ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಮೂಲಕ ಈ ದೇಶಕ್ಕೆ ಸಾವಿರಾರು ಅಧಿಕಾರಿಗಳನ್ನು ಕೊಡುಗೆ ಕೊಟ್ಟವರು. ಅಭಿವೃದ್ಧಿ ಪರ ಚಿಂತಿಸುವ ಇಂಥ ಹೊಸ ಮುಖ ಯುವಕನನ್ನ ನೀವು ಬೆಂಬಲಿಸಬೇಕಾಗಿದೆ. ಈ ಬಾರಿ ಬದಲಾವಣೆಯನ್ನು ಜನ ಬಯಸಿದ್ದಾರೆ. ವಿನಯ್ ಕುಮಾರ್ ಅವರ ಗೆಲುವು ಜನರ ಗೆಲುವು ಎಂದು  ದಾವಣಗೆರೆ ಮಹಿಳಾ ನಾಯಕಿ ಗೀತಾ ಮುರುಗೇಶ್  ಹೇಳಿದರು.