ಜಿ. ಬಿ. ವಿನಯ್ ಕುಮಾರ್ ಪರ ಜಗಳೂರಿನಲ್ಲಿ ಪ್ರಚಾರ


ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೦:  ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಪರ ದಾವಣಗೆರೆ ನಗರಸಭಾ ಮಾಜಿ ಸದಸ್ಯೆ ಗೀತಾ ಮುರುಗೇಶ್ ನೇತೃತ್ವದಲ್ಲಿ ಜಗಳೂರಿನಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು.ಜಗಳೂರು ಸ್ಥಳೀಯ ಮುಖಂಡರಾದ ಮಹಾಂತೇಶ್, ವಾಸು, ಕರಿಬಸಪ್ಪ ಜೊತೆ ಹಲವು ಮುಖಂಡರು  ಜಗಳೂರು ಕ್ಷೇತ್ರದ ಅಸಗೋಡು ಗ್ರಾಮದಲ್ಲಿ ಮತಯಾಚಿಸಿದರುದಾವಣಗೆರೆಯ ಎರಡು ಸಿರಿವಂತ ಕುಟುಂಬಗಳು ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಕೆಲವೇ ಕುಟುಂಬಗಳಿಗೆ ಸೀಮಿತವಾಗಿದೇ, ಉಳ್ಳವರ ನಡುವೆ  ಶೋಷಿತರು, ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು ಕೇವಲ ಮತ ಹಾಕುವುದಕ್ಕೆ ಮಾತ್ರ ಮಾತ್ರ ಸೀಮಿತಗೊಂಡಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣ, ಅಧಿಕಾರ ಹಂಚಿಕೆ ಆಗದ ಹೊರತು ಸಂವಿಧಾನ ಆಶಯಗಳಿಗೆ ಬೆಲೆ ಸಿಗಲಾರದು ಎಂದು ಮುಖಂಡರು ಹೇಳಿದರು.ವಿನಯ್ ಕುಮಾರ್ ಅವರು  ಬಡವರ ಪರ, ಮಧ್ಯಮ ವರ್ಗದ ಪರ ಕನಸುಗಳನ್ನು ಹೊತ್ತ ಯುವಕ.  ಐಎಎಸ್ ಇನ್ಸೈಟ್ಸ್  ಮೂಲಕ ಈ ದೇಶಕ್ಕೆ ಸಾವಿರಾರು ಅಧಿಕಾರಿಗಳನ್ನು ಕೊಡುಗೆ ಕೊಟ್ಟವರು. ಜನ ಅಭಿವೃದ್ಧಿಪರ ಚಿಂತಿಸುವ ಇಂಥ ಹೊಸಬರಿಗೆ ನೀವು ಬೆಂಬಲಿಸಿ. ಈ ಬಾರಿ ಬದಲಾವಣೆ ಜನ ಬಯಸಿದ್ದಾರೆ, ವಿನಯ್ ಕುಮಾರ್ ಗೆಲುವು ಅದು ಜನರ ಗೆಲುವು ಎಂದು  ದಾವಣಗೆರೆ ಮಹಿಳಾ ನಾಯಕಿ ಗೀತಾ ಮುರುಗೇಶ್ ತಿಳಿಸಿದರು.