ಜಿ.ಬಿ. ವಿನಯ್ ಕುಮಾರ್ ಗ್ಯಾರಂಟಿ ಕಾರ್ಡ್ ಬಿಡುಗಡೆ

ದಾವಣಗೆರೆ.ಮೇ.೬: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರ ಗ್ಯಾರಂಟಿ ಕಾರ್ಡ್ ನ್ನು  ಬಿಡುಗಡೆ ಮಾಡಲಾಯಿತು.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮುಖಂಡ  ಚಂದ್ರು ಬಸವಂತಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್ ಅವರು ಸಂಸದರಾಗಿ ಆಯ್ಕೆ ಯಾದಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವರು ಎಂದು ತಿಳಿಸಿದರು.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಫುಡ್  ಪ್ರೋಸೆಸಿಂಗ್ ಯೂನಿಟ್, ಆಗ್ರೋ ಇಂಡಸ್ಟ್ರೀಸ್, ಐಟಿ ಬಿಟಿ, ಅಡಕೆ, ಮೆಕ್ಕೆಜೋಳ, ಭತ್ತ ಇತರೆ ಬೆಳೆಗಳ ಸಂಶೋಧನಾ ಕೇಂದ್ರ ಪ್ರಾರಂಭ, ಕ್ರೀಡಾ ಅಕಾಡೆಮಿ, ಜವಳಿ ಪಾರ್ಕ್, ಜವಳಿ ಉದ್ಯಮಕ್ಕೆ ಉತ್ತೇಜನ, ಕೋಲ್ಡ್ ಸ್ಟೋರೇಜ್, ಏತ ನೀರಾವರಿ ಒಳಗೊಂಡಂತೆ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳುವರು ಎಂದು ತಿಳಿಸಿದರು.ಕರ್ನಾಟಕ ಸಾಮಾಜಿಕ ನ್ಯಾಯ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಗವಾಯಿ ಷಣ್ಮುಖ, ಅನಿಲ್ ಕುಮಾರ್, ಶಿವಕುಮಾರ್ ಕುಂದುವಾಡ, ಎಸ್.ಜಿ. ಪಾಟೀಲ್, ಮಂಜುನಾಥ್ ಹದಡಿ ಇದ್ದರು.