ಕಲಬುರಗಿ,ಜೂ.20-ಕಲಬುರಗಿ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2017ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿ ಭನ್ವರ್ ಸಿಂಗ್ ಮೀನಾ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಸಿ.ಇ.ಓ. ಡಾ.ಗಿರೀಶ್ ಡಿ. ಬದೋಲೆ ಅವರು ನೂತನ ಸಿ.ಇ.ಓ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.
ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಭೂಸ್ವಾಧೀನದ ಜನರಲ್ ಮ್ಯಾನೇಜರ್ ಆಗಿದ್ದ ಭನ್ವರ್ ಸಿಂಗ್ ಮೀನಾ ಅವರನ್ನು ಕಲಬುರಗಿ ಜಿ.ಪಂ.ಸಿ.ಇ.ಓ ಹಾಗೂ ಜಿ.ಪಂ. ಸಿ.ಇ.ಓ. ಆಗಿದ್ದ ಡಾ.ಗಿರೀಶ್ ಡಾ.ಗಿರೀಶ್ ಡಿ. ಬದೋಲೆ ಅವರನ್ನು ಕೆ.ಪಿ.ಎಸ್.ಸಿ ನಿಯಂತ್ರಕರನ್ನಾಗಿ ವರ್ಗಾಯಿಸಿ ಸೋಮವಾರ ಸರ್ಕಾರ ಆದೇಶ ಹೊರಡಿಸಿತ್ತು.