ಜಿ.ಪಂ.ಸಿಇಓ ವಿವಿಧ ಕಾಮಗಾರಿ ವೀಕ್ಷಣೆ – ಸೂಚನೆ

ಲಿಂಗಸುಗೂರ.ಡಿ.೦೪-ರಾಯಚೂರ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಯೂಸುಫ್ ಶೇಖ ಪಟ್ಟಣದ ಕರಡಕಲ್ ಕೆರೆ ಕಾಮಗಾರಿ ಹಾಗೂ ಹೊನ್ನಳ್ಳಿ ಇತರಡೆ ನರೇಗಾ ಹಾಗೂ ಜೆಜೆಎಮ ಕುಡಿಯುವ ನೀರಿನ ಕಾಮಗಾರಿಗಳನ್ನು ವೀಕ್ಷಣೆ ಕಾಮಗಾರಿ ಗುಣಮಟ್ಟದೊಂದಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಂಬsಂದಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಗುರುವಾರ ಪಟ್ಟಣದ ಕರಡಕಲ್ ಕೆರೆಹತ್ತಿರ ಅಗಲಿಕರಣ ಉದ್ಯಾನವನ ಕಾಮಗಾರಿ ವಿಕ್ಷಿಸಿ ತುರ್ತು ಮುಗಿಸಿ ನಾಗರಿಕರ ಉಪಯೋಗಕ್ಕೆ ಅನಕೂಲ ಮಾಡಲು ಜಿ,ಪಂ ಎಇಇಗೆ ಸೂಚಿಸಿದರು.
ತಾಲೂಕಿನ ಹೊನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ಸಿ,ಸಿ ರಸ್ತೆ ಅಂಗನವಾಡಿ ಕಟ್ಟಡ ಸಿಹಿ ನೀರಿನ ಭಾವಿ ಭೋಜನಾಲಯ ಹಾಗೂ ಜೆಜೆಎಮ್ ಕಾಮಗಾರಿಗಳನ್ನು ಕೂಲಕುಂಷವಾಗಿ ವೀಕ್ಷಿಸಿ, ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಸೂಚಿಸಿದರು
ಈಸಂಧರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಹಾಕ ಅಧಿಕಾರಿ ಲಕ್ಷ್ಮೀ ದೇವಿ. ಸಹಾಯಕ ನಿರ್ದೆಶಕರು(ಗ್ರಾ,ಉ)ಸೋಮನಗೌಡ ಪಾಟೀಲ್ ಸಹಾಯಕ ನಿರ್ದೆಶಕರ(ಪಂಚಾಯತರಾಜ) ಮಂಜುನಾಥ ಜಾವೂರ ಜಿಪಂ ಎಇಇ ಹಾಗೂ ತಾಂತ್ರಿಕಸಹಾಯಕರು ಸಂಯೋಜಕರು ಮತ್ತು ಬಾಲಪ್ಪ ಭಾಗವಹಿಸಿದ್ದರು.