ಜಿ.ಪಂ ಸಿಇಒ ರಿಂದ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳ ವೀಕ್ಷಣೆ

ರಾಯಚೂರು.ಸೆ.೧೩- ತಾಲೂಕಿನ ಬಿಜನಗೇರಾ ಮತ್ತು ಮಿಟ್ಟಿಮಲ್ಕಾಪೂರು ಗ್ರಾಮ ಪಂಚಾಯತಿಗಳಿಗೆ ಇಲ್ಲಿಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಸೋಮವಾರ ದಂದು ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಬಿಜನಗೇರಾ ಗ್ರಾಮ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ತೋಟಗಾರಿಕೆ ಇಲಾಖೆ ಮುಖಾಂತರ ಡ್ರ್ಯಾಗನ್ ಫ್ರೂಟ್ ತೋಟದಲ್ಲಿ ಬೆಳೆದಿರುವ ಕಾಮಗಾರಿಯನ್ನು ವಿಕ್ಷಣೆ ಮಾಡಿ, ನಂತರ ಪಿ.ಎಮ್.ವೈ.ಜಿ.ಎಸ್ ಯೋಜನೆಯಡಿ, ಬೋಳಮಾನದೊಡ್ಡಿಯಿಂದ ಸಿದ್ರಾಮಪೂರು ಮತ್ತು ಸಿದ್ರಾಮಪೂರು ದಿಂದ ದೇವನಪಲ್ಲೆ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ತದನಂತರ ಮಿಟ್ಟಿಮಲ್ಕಾಪೂರು ಗ್ರಾಮ ಪಂಚಾಯತಿಯ ದೇವಪಲ್ಲೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಶಾಲಾ ಕಂಪೌಂಡ್, ಹೈಟೆಕ್ ಶೌಚಾಲಯ ಹಾಗೂ ಬಿಸಿಯೂಟ ಕೋಣೆಯಲ್ಲಿ ಇರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ಶಾಲೆಯ ೬ ನೇ ತರಗತಿ ಕೋಣೆಗೆ ತೆರಳಿ, ಮಕ್ಕಳೊಂದಿಗೆ ವಿದ್ಯಾಭ್ಯಾಸ ಮತ್ತು ಊಟದ ವ್ಯವಸ್ಥೆ ಬಗ್ಗೆ ಮಕ್ಕಳಿದ ಮಾಹಿತಿ ಪಡೆದರು. ಹಾಗೂ ಅಂಗನವಾಡಿಯಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿ, ಅಡುಗೆ ಸಹಾಯಕರಿಗೆ ಮಕ್ಕಳಿಗೆ ಗುಣಮಟ್ಟದ ಊಟ ನೀಡಲು ಸೂಚಿಸಿದರು.
ನಂತರ ಮಿಟ್ಟಿಮಲ್ಕಾಪೂರು ಗ್ರಾಮದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ, ಕಾಮಗಾರಿ ಗುಣಮಟ್ಟತೆಯಿಂದ ಪೂರ್ಣಗೊಳಿಸಲು ತಿಳಿಸಿದರು.
ನಂತರ ಗ್ರಾಮ ಪಂಚಾಯತಿ ತೆರಳಿ, ವಸತಿ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಡತಗಳನ್ನು ಪರಿಶೀಲಿಸಿ, ಕಡ್ಡಾಯವಾಗಿ ಕಡತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.
ನಂತರ ಯರಗೇರಾ ಗ್ರಾಪಂಯ ವಿಶ್ವವಿದ್ಯಾಲಯದಲ್ಲಿ ನಿರ್ಮಾಣವಾದ ಅಮೃತ ಮಹೋತ್ಸವ ಸವಿನೆನಪಿಗಾಗಿ ಅಮೃತ ಸೋರವರ ಯೋಜನೆ ಅಡಿಯಲ್ಲಿ ಕೊತ್ತಕುವಂ ಕೆರೆಯನ್ನು ಪರಿಶೀಲಿಸಿ ಅವರು ಈ ಕೆರೆ ತುಂಬ ನೀರಿನ ಸಂಗ್ರಹ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಮತ್ತು ಜನ ಜಾರುವಾರುಗಳಿಗೆ ಉಪಯುಕ್ತವಾಗುವುದರ ಜೊತೆಗೆ ಒಳ್ಳೆಯ ವಾತವಾರಣವನ್ನು ಕಲ್ಪಿಸುತ್ತದೆ. ಇದನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶ ಗಲಗ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇರಲಾಲ್, ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಕೇಶ ಕುಮಾರ, ತಾಂತ್ರಿಕ ಸಹಾಯಕ ಭರತ್ ದೇಸಾಯಿ, ಕಾರ್ಯದರ್ಶಿ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.