ಜಿ.ಪಂ ಸಿಇಒ ಆಗಿ ರಾಹುಲ್ ಟಿ ಪಾಂಡೈ ನೇಮಕ

ರಾಯಚೂರು ಆ 08: ಕಳೆದ ವಾರ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಶಶಿಧರ ಕುರೇರ್ ವರ್ಗಾವಣೆಯಾಗಿದ್ದು, ಖಾಲಿಯಾದ ಸ್ಥಾನಕ್ಕೆ ಇಷ್ಟು ದಿನ ಯಾರನ್ನು ಸಹ ನೇಮಕ ಮಾಡಿರಲಿಲ್ಲ,ಸದ್ಯ ರಾಯಚೂರು ಜಿಲ್ಲೆಯಲ್ಲಿ ಖಾಲಿ ಇದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಹುಲ್ ತುಕಾರಾಂ ಪಾಂಡೈ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಜಿ.ಪಂ ಸಿಇಓ ಆಗಿದ್ದ ಶಶಿಧರ್ ಕುರೇರ್ ರವರು ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆಗೊಂಡಿದ್ದರು. ಸದ್ಯ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಜಿ.ಪಂ ಸಿಇಒ ಹುದ್ದೆಗೆ ವರ್ಗಾವಣೆ ಮಾಡಿ ಜೆಸ್ಕಾಂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಆದೇಶ ಹೊರಡಿಸಿದ್ದಾರೆ.