
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಅ,3- ತಾಲ್ಲೂಕಿನ ಉಪ್ಪರಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಎಸ್.ಸಂಕನೂರ ಅವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
8ನೇ ತರಗತಿಯ ಕೊಠಡಿಗೆ ತೆರಳಿ ಬೋರ್ಡ್ ಮೇಲೆ ಲೆಕ್ಕ ಬರೆದು ವಿದ್ಯಾರ್ಥಿಗಳಿಗೆ ಬಿಡಿಸಲು ಹೇಳಿದರು, ಮಗ್ಗಿಗಳನ್ನು ಕೇಳಿದರು, ನಂತರ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು.
ತಾ.ಪಂ ಇಒ ಕುಮಾರ್ ದಂಡಪ್ಪನವರ್, ಪಿಡಿಒ ನಾಗಮಣಿ ಅತ್ತಲಿ, ಸಿ ಅರ್ ಪಿ ರಮೇಶ್ ನಾಯಕ ಇದ್ದರು.