ಜಿ.ಪಂ ಸದಸ್ಯರಿಂದ ದ್ವೀಚಕ್ರ ವಾಹನ ವಿತರಣೆ

ಕೊಪ್ಪಳ ನ. 22 : ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಲ್ಲಿ ಲೇಬಗೇರಾ ಜಿ,ಪಂ.ಸದಸ್ಯ ಗವಿಸಿದ್ದಪ್ಪ ಸಂಗಣ್ಣ ಕರಡಿಯವರು ವಿಕಲಚೇತನ ಹನುಮಂತಪ್ಪ ಮುಂಡರಗಿ ಹನುಮನಹಳ್ಳಿ ಅವರಿಗೆ ಶನಿವಾರದಂದು ದ್ವೀಚಕ್ರ ವಾಹನವನ್ನು ವಿತರಿಸಿದರು.
ನಂತರ ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ ಮಾತನಾಡಿ ಸರಕಾರ ನೀಡಿದ ದ್ವೀಚಕ್ರ ವಾಹನವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಣ್ಣ ಚೌಡ್ಕಿ, ಮುಖಂಡರಾದ ಬಸವರಾಜ್ ಪಿನ್ನಿ, ಯಮನೂರಪ್ಪ ಬಗನಾಳ, ಲಕ್ಷ್ಮಣ, ಹನುಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.