ಜಿ. ಪಂ. ಮಾಜಿ ಅಧ್ಯಕ್ಷ ಅಷ್ಠಗಿ ಮನೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ ಸಂದೀಪ ಕುಮಾರ್ ಸೌಹಾರ್ದ ಭೇಟಿ

ಕಲಬುರಗಿ:ನ.19: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಂಬಾರಾಯ ಅಷ್ಠಗಿ ಅವರ ಮನೆಗೆ ಸೌಹಾರ್ದಯುತವಾಗಿ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ ಸಂದೀಪ ಕುಮಾರ್ ಕೆ ಸಿ ಯವರನ್ನು ಬಿಜೆಪಿ ಮುಖಂಡ ಹಾಗೂ ಚಿಂತಕ
ಪ್ರೊ.ಯಶವಂತರಾಯ್ ಅಷ್ಠಗಿ ಹಾಗೂ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ
ಡಾ.ಮಲ್ಲಿಕಾರ್ಜುನ ಲಠ್ಠೆ ಯವರು ಸಂಗ್ರಹಿಸಿದ; ತತ್ವಪದ,ಜನಪದ ಹಾಗೂ ವಚನಕಾರ ದಲಿತ ಕವಿ ಜಂಬಗಿ ಶರಣರ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಸಂದೀಪ ಕುಮಾರ್ ರವರು ಜಂಬಗಿ ಶರಣರ ಜೀವನ ಹಾಗೂ ಬರಹದ ಬಗ್ಗೆ ತಿಳಿದುಕೋಂಡು,ಇಂತಹ ದಲಿತ ಕವಿ ಹಾಗೂ ಬಹುಮುಖ ಪ್ರತಿಭೆಯ ಶರಣರು ಈ ಭಾಗದಲ್ಲಿ ಆಗಿ ಹೋದದ್ದು ಒಂದು ಇತಿಹಾಸವೇ ಸರಿ ಎಂದರು.ಜಂಬಗಿ ಶರಣರ ಅಧ್ಯಯನ ಪೀಠ ಸ್ಥಾಪಿಸಲು ಈ ಭಾಗದ ನಾಯಕರು ಮುಂದಾಗಬೇಕು ಅವರ ಜೊತೆಗೆ ನಾನು ಇರುತ್ತೇನೆ ಎಂದು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಸಂತ ಗೌಡ,ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ತೆಗನೂರ, ಕಲಬುರಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ಅಂಬಾರಾಯ ಅಷ್ಠಗಿ, ವನೀತಾ ಯಶವಂತರಾಯ ಅಷ್ಠಗಿ, ಬಿಜೆಪಿ ಯುವ ಮುಖಂಡ ಸುನಿಲ್ ಕೋಟ್ರೆ, ಮೆಘರಾಜ ಅರಳಿ,ಬಾಬುರಾವ ವೈಜಾಪೂರ,ರಾಣೇಶ ಅಷ್ಠಗಿ, ವೀರು ಸ್ವಾಮಿ, ಮತ್ತು ಅಷ್ಠಗಿ ಪರಿವಾರದ ಸದಸ್ಯರು ಇದ್ದರು.