
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 18 :- ಬಳ್ಳಾರಿ ಜಿಲ್ಲಾಪಂಚಾಯತಿಯ ಮಾಜಿ ಅಧ್ಯಕ್ಷೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ಕೆ ಸುನಂದಬಾಯಿ ಕೃಷ್ಣನಾಯ್ಕ್ (47)ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಪತಿ ಕೃಷ್ಣನಾಯ್ಕ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಕಾಂಗ್ರೇಸ್ ನ ಸಕ್ರಿಯ ಕಾರ್ಯಕರ್ತನಾಗಿದ್ದ ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಕೃಷ್ಣನಾಯ್ಕ್ ಅವರು 2010ರ ಜಿಲ್ಲಾಪಂಚಾಯತಿ ಚುನಾವಣೆಯಲ್ಲಿ ಪತ್ನಿ ಕೆ ಸುನಂದಬಾಯಿ ಅವರನ್ನು ಎಂ ಬಿ ಅಯ್ಯನಹಳ್ಳಿ ಕ್ಷೇತ್ರದಿಂದ ಸ್ಪರ್ದಿಸಿ ಗೆಲುವು ಪಡೆದುಕೊಂಡಿದ್ದು ಅಲ್ಲದೆ ಅದೃಷ್ಟವೆಂಬಂತೆ 2010ರಿಂದ 2015ರ ಅವಧಿಯಲ್ಲಿ ಜಿಲ್ಲಾಪಂಚಾಯತಿ ಅಧ್ಯಕ್ಷರಾಗಿ ಹಾಗೂ ಜಿ ಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದರು.
ನಾಲ್ಕೈದು ವರ್ಷದಿಂದ ಡಿಮೋನ್ಶಯ ಎಂಬ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಚಿಕ್ಕಜೋಗಿಹಳ್ಳಿ ತಾಂಡಾದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು ಪತಿ ಕೃಷ್ಣನಾಯ್ಕ್ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇಂದು ಸಂಜೆ ಅಂತ್ಯಕ್ರಿಯೆ : ಜಿ ಪಂ ಮಾಜಿ ಅಧ್ಯಕ್ಷೆ ಸುನಂದಬಾಯಿ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4-30ಗಂಟೆ ಸುಮಾರಿಗೆ ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಪತಿ ಕೃಷ್ಣನಾಯ್ಕ್ ಪತ್ರಿಕೆಗೆ ತಿಳಿಸಿದ್ದಾರೆ.
ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರು ಜಿ ಪಂ ಮಾಜಿ ಅಧ್ಯಕ್ಷೆ ಸುನಂದಬಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಹಾಗೂ ಶಾಸಕರ ಸಹೋದರ ಎನ್ ಟಿ ತಮ್ಮಣ್ಣ, ಕಾಂಗ್ರೇಸ್ ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ, ಜಿ ಪಂ ಮಾಜಿ ಸದಸ್ಯ ಶಶಿಧರಸ್ವಾಮಿ ಸೇರಿದಂತೆ ಇತರೆ ಕಾಂಗ್ರೇಸ್ ಮುಖಂಡರು ಸೇರಿ ಅವರ ಮನೆಗೆ ಭೇಟಿ ನೀಡಿ ಪತಿ ಕೃಷ್ಣನಾಯ್ಕ್ ಹಾಗೂ ಮಕ್ಕಳಿಗೆ ಸಾತ್ವನ ನೀಡಿ ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.