ಜಿ.ಪಂ- ತಾ.ಪಂ ನಲ್ಲಿ ಬಿಜೆಪಿಗೆ ಜಯ; ವಿಶ್ವಾಸ

ನಾಯಕನಹಟ್ಟಿ.ಸೆ.೨೨; ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷೆಯಾದ ಶಾರದಮ್ಮ ವಿಶ್ವಾಸದಿಂದ ನುಡಿದರು.ನಾಯಕನಹಟ್ಟಿ ಸಮೀಪದ ಗಿಡ್ಡಾಪುರ ಗ್ರಾಮದಲ್ಲಿ ಸುದ್ದಿಗೊಷ್ಠಿಯೊಂದಿಗೆ ಮಾತನಾಡಿದ ಅವರು ರೈತರ ಖಾತೆಗೆ ಹಣ ಜಮಾ ಆಗಿದೆ. ಕೇಂದ್ರದ ಅನೇಕ ಜನಪರ ಯೋಜನೆಗಳಿಗೆ ರೈತರ ಪರ ಯೋಜನೆಯಾದ ಕಿಸಾನ್ ಸಮ್ಮಾನ್ ಅತ್ಯಂತ ಮಹತ್ವ ಪಡೆದಿದೆ. 
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಪರ ಕೃಷಿ ಮಸೂದೆಗಳಿಂದ ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರು ಯಾರಿಗೆ ಬೇಕಾದರು ಮಾರಬಹುದು ಎಂಬ ಸ್ವಾತಂತ್ರö್ಯ ಕೊಟ್ಟಿದೆ ಎಂದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅನೇಕ ಸಂದರ್ಭಗಳಲ್ಲಿ ಮಸೂದೆಗಳು ತಿದ್ದುಪಡಿಯಾಗಿವೆ ಅಂತಿಮವಾಗಿ ಬಹುಮತದ ಆಧಾರದ ಮೇಲೆ ಜನರ ಹಿತ ಅರ್ಥಮಾಡಿಕೊಂಡು ಆಡಳಿತ ಮತ್ತು ಪ್ರತಿ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಕಾರ್ಯ ರೂಪಕ್ಕೆ ತಂದತಹ ಸಂದರ್ಭಗಳಲ್ಲಿ ಅದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಲಾಗದೆ. ಕೇವಲ ರಾಜಕೀಯ ಉನ್ನಾರ ಮಾಡುತ್ತ ತಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೊಸ್ಕರ ದೇಶದ ದಿಕ್ಕನ್ನೆ ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಸವರಾಜ್ ಬೊಮ್ಮಯಿ ಮುಖ್ಯಮಂತ್ರಿಯಾದ ನಂತರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಜಾರಿಗೆ ತಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದು ಸಂವಿಧಾನದ 374 ರದ್ದು ಮಾಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ತ್ರಿವಳಿ ತಲ್ಲಾಖ್ ವಿರುದ್ದು ಕಾನೂನು ಜಾರಿ, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

 ಮೋದಿ ಸರ್ಕಾರದ ಯೋಜನೆಗಳನ್ನು ಹಾಗೂ ಜನಪರ ಸಾಧನೆಗಳನ್ನು ಜನರಿಗೆ ವಿವರಿಸಿ ತಲಿಪಿಸುವ ಪ್ರಯತ್ನವನ್ನು ಪಕ್ಷ ಮಾಡಲಿದೆ ಎಂದರು. ಈ ದೇಶದಲ್ಲಿ ಯಾವ ರೀತಿ ಆಡಳಿತ ನಡೆಸುವುದು ಎನ್ನುವುದು ಎಲ್ಲಾರಿಗೂ ಗೊತ್ತಿದೆ. 60 ವರ್ಷ ಅವರ ಆಡಳಿತ ನೋಡಿ ವೈಖರಿಯಿಂದಾಗಿ ಹಾಗೂ ಕೊರೊನ ಸಂಕಷ್ಟದಿAದ ಬೆಲೆ ಏರಿಕೆಯಾಗಿದೆ ಹೊರತು ಬಿಜೆಪಿಯಾಗಲಿ ಜನರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಎಂದೂ ಕೂಡ ನಡೆದುಕೊಳ್ಳುವುದಿಲ್ಲ. ದೇಶದ ಬಗ್ಗೆ ಚಿಂತನೆ ಮಾಡುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ.
 ಪ್ರದಾನಿ ನರೇಂದ್ರ ಮೋದಿ ಆಡಳಿತದಲ್ಲಿ ಮಾತ್ರ ಭ್ರಷ್ಟಚಾರ ಇಲ್ಲದೇ ಆಡಳಿತ ನಡೆಸುತ್ತಿದೆ. ಹಿಂದೆ ಈ ದೇಶವನ್ನು ಆಳಿದವರು ಎಷ್ಟೋ ಲೂಟಿ ಹೊಡೆದಿದ್ದಾರೆ ಎನ್ನುವ ಮಾಹಿತಿ ಜನರಿಗೂ ಕೂಡ ಇದೇ, ಈ ನಿಟ್ಟಿನಲ್ಲಿ ಇದೇಲ್ಲವನ್ನು ಅರಿತು ಸುಭದ್ರ ದೇಶ ಕಟ್ಟಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಕೋವಿಡ್-19 ಮಹಾಮಾರಿ ಇಡಿ ಜಗತ್ತನ್ನೆ ಕಾಡುತ್ತಿದೆ ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ತೆಗೆದುಕೊಂಡ ಸೂಕ್ತ ನಿರ್ಧಾರಗಳಿಂದ ಇಡಿ ನಮ್ಮ ದೇಶದಲ್ಲಿ ಕೋರೊನಗೆ ವ್ಯಾಕ್ಸಿನ್ ಕಂಡುಹಿಡಿದು ದೇಶದ ಎಲ್ಲಾ ಜನರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ಅವರು ಹೇಳಿದರು.