ಜಿ.ಪಂ ತಾ.ಪಂ ಚುನಾವಣೆ ಮುಂದೂಡಿ, ತಜ್ಞರ ಶಿಫಾರಸು ಪಾಲನೆಗೆ ಸಿದ್ದು ಸಲಹೆ

ಬೆಂಗಳೂರು, ಏ.20-ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಬೇಕು. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಮಾಡುವಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಆದರೆ ಲಾಕ್ ಡೌನ್ ಜಾರಿಗೆ ಸಲಹೆ ನೀಡಿಲ್ಲ.
ತಜ್ಞರ ಸಮಿತಿ ಹೇಳಿದ ಹಾಗೆ ಕೆಲವೊಂದು ಶಿಫಾರಸ್ಸನ್ನು ಜಾರಿ ಮಾಡಿ ಬೇರೆ ದೇಶಗಳಿಂದ ಬರುವ ವಿಮಾನ ರದ್ದು ಮಾಡಿ ಎಂದು ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು,
ಕೊರೋನಾ ಸೋಂಕಿಗೆ ಒಳಗಾಗಿರುವ ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬೇಗ ಗುಣವಾಗಲಿ ಎಂದು ಆರೈಸಿದರು. ರಾಜ್ಯಪಾಲರು ಕರೆದಿರುವ ಸಭೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಜ್ಞರ ವರದಿ ಬಂದ ತಕ್ಷಣ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಆಗಲಿಲ್ಲ. ಇವತ್ತು ಬೆಡ್, ವೆಂಟಿಲೇಶನ್, ಆಕ್ಸಿಜನ್ ಸಿಗ್ತಾ ಇಲ್ಲ. ಇದು ವಾಸ್ತವ ಪರಿಸ್ಥಿತಿ. ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಆಕ್ಸಿಜನ್ ಇಲ್ಲದೆ ತೀರಿಕೊಂಡರು. ಇದಕ್ಕಿಂತ ಉದಾಹರಣೆ ಬೇಕಾಾ ಎಂದು ಪ್ರಶ್ನಿಸಿದರು.

ಸರ್ಕಾರ ಏನೇ ಹೇಳಿದರೂ ಸದ್ಯ ಕೊರೋನಾ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ತನ್ನ ವಿಫಲತೆ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.