ಜಿ.ಪಂ. ಉಪಾಧ್ಯಕ್ಷ ದೇಸಾಯಿಗೆ ಕೊರೊನಾ

ಮುದ್ದೇಬಿಹಾಳ:ಎ.26: ಪಟ್ಟಣದ ಇಲಲಿನ ಹುಡ್ಕೋ ಬಡಾವಣೆ ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರಿಗೆ ರವಿವಾರ ಕೋರೋನಾ ಸೊಂಕು ತಗುಲಿದ್ದು ಇವರಿಗೆ ಯಾವೂದೇ ರೋಗ ಲಕ್ಷಣಗಳು ಕಂಡು ಬಂದಿರುವುದಿಲ್ಲ ಆದರೇ ಕೋರೊನಾ ಸೊಂಕು ತಗುಲಿದ್ದರಿಂದ ಅವರ ಜೊತೆಗೆರುವವರು ಸಹಿತ ಕೋರೊನಾ ಪರೀಕ್ಷಿಸಿಕೊಳ್ಳುವ ಮೂಲಕ ಕೊರೊನಾ ಬಗ್ಗೆ ಮುಂಜಾಗ್ರತಿ ಕ್ರಮ ವಹಿಸಿಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸುವುದು ಆಗಾಗ ಸ್ಯಾನಿಟೈಜರ್ ಬಳಸುವುದು ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋರೊನಾದಿಂದ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.