ಜಿ ಕೋಡಿಹಳ್ಳಿ ಕೆರೆಗೆ ನೀರು ಹರಿಸಲು ಒತ್ತಾಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.08 ತಾಲೂಕಿನ ಜಿ.ಕೋಡಿಹಳ್ಳಿ ಕೆರೆಗೆ ಶಾಶ್ವತವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಕೆ ಆರ್ ಎಸ್  ಪಕ್ಷದ ಕಾರ್ಯಕರ್ತರು ಬುಧವಾರ ತಹಸೀಲ್ ಕಚೇರಿ  ಮುಂದೆ ಅನಿರ್ದಿಷ್ಟ ಸತ್ಯಾಗ್ರಹ ಧರಣಿ ನಡೆಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ದೊಡ್ಡಮನಿ ಮಾತನಾಡಿ , ಈಗಾಗಲೇ ಪಕ್ಕದ ಬನ್ನಿಕಲ್  ಕೆರೆ ತುಂಬಿ ಹದಿನೈದು ದಿನದಿಂದ ಕೋಡಿ ಬಿದ್ದಿದ್ದು ನೀರು ಸಂಪೂರ್ಣ ವಾಗಿ ತುಂಗಭದ್ರಾ ನದಿ ಗೆ ಹೋಗಿ ಸಮುದ್ರ ಪಾಲು ಆಗುತ್ತಿದೆ , ಕೆಲಸ ಮುಗಿದ ಮೂರು ವರ್ಷ ಕಳೆದರು ಕೆರೆಗೆ  ನೀರು ತುಂಬಿಸುವ  ಗೇಟ್ ಎತ್ತಿ ನೀರು ಬಿಡುಲು ಅಧಿಕಾರಿಗಳು ವಿಫಲರಾಗಿದ್ದಾರೆ, ಕೂಡಲೇ ಕೆರೆಗೆ ನೀರು ಹರಿಸುವ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಯುವ ಘಟಕದ ಅಧ್ಯಕ್ಷ ವಿರನಗೌಡ,  ಈಡಿಗರ ಕರಿಬಸಪ್ಪ, ಟಿ ನಜೀರ್ ಅಲ್ಪಸಂಖ್ಯಾತ ಅಧ್ಯಕ್ಷರು, ಎಸ್ ಸಿ ಘಟಕದ ಅಧ್ಯಕ್ಷ ವಿರಪಕ್ಷಪ್ಪ ಮಾಜಿ ಸೈನಿಕರು ಜಿಲ್ಲಾ ಉಪಾಧ್ಯಕ್ಷ ಮುದುಕಪೊಪ, ರೈತ ಸಂಘದ ಜಿಲ್ಲಾ ಮುಖಂಡರು ಏಣಿಗಿ ಮಹಬೂಬ್, ಅಕ್ಕಿ ಮಂಜುನಾಥ್. ಹಡಗಲಿ ಉಪಾಧ್ಯಕ್ಷ , ದುದೂ ಪೀರು ತಾ ಅಲ್ಪಸಂಖ್ಯಾತ ಅಧ್ಯಕ್ಷ.  ಕೋಡಿಹಳ್ಳಿ ಬಸವರಾಜ, ಸುನಿಲ್, ಆನಂದ, ಕೋಡಿಹಳ್ಳಿ ಗ್ರಾಮ ದ ರೈತರು ಇದ್ದರು,