ಜಿ.ಕರೆಮ್ಮ ನಾಯಕರಿಗೆ ಮಂಗಳ ಮುಖಿಯರಿಂದ ಅದ್ದೂರಿ ಸ್ವಾಗತ

ಸಿರವಾರ,ಮಾ.೦೪- ಜೆಸಿಬಿ ಮೂಲಕ ಹೂಮಳೆ, ಕಲಾತಂಡಗಳ ನೃತ್ಯ, ಮಂಗಳಮುಖಿಯರ ಆರತಿ, ರಾತ್ರಿಯಾದರೂ ದಣಿವು ಎನ್ನದೆ ತಮ್ಮ ನಾಯಕಿಯನ್ನು ಬರಮಾಡಿಕೊಂಡು ಹುಡಿ ತುಂಬಿದ ಮುತೈದೆಯರು. ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಜಿದಾ ಜಿದ್ದಿನ ಕ್ಷೇತ್ರವಾದ ದೇವದುರ್ಗ ಕ್ಷೇತ್ರದ ಜೆ.ಜಾಡಲದಿನ್ನಿ ಗ್ರಾಮಪಂಚಾಯತಿಯಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿಯಾದ ಕರೆಮ್ಮ ಜಿ.ನಾಯಕ ಅವರನ್ನು ಮತದಾರರು, ಸಾರ್ವಜನಿಕರು ಬರಮಾಡಿಕೊಂಡ ರೀತಿ ಇದಾಗಿತು. ಗ್ರಾಮ ವಾಸ್ತವ್ಯದ ಅಂಗವಾಗಿ ಮನೆ ಮನೆಗೆ, ಜೆಡಿಎಸ್, ಮನೆ ಮನೆಗೆ ಕರೆಮ್ಮ ಕಾರ್ಯಕ್ರಮ ಚುನಾವಣೆಗೆ ಜನರನ್ನುದೇಶಿಸಿ ಮಾತನಾಡಿದ ಅವರು ೧೦ ವರ್ಷದ ಆಡಳಿತದಲ್ಲಿ ದೇವದುರ್ಗ ತಾಲೂಕಿನ ಬಿಜೆಪಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿರುದ್ಧ ನಮ್ಮ ಸ್ಪರ್ಧೆಯಲ್ಲಾ ಕೆ.ಶಿವನಗೌಡ-ಬಿ.ವಿ.ನಾಯಕ ವಿರುದ್ಧ ಆ ಎರಡು ಮನೆಯ(ಅರಕೇರಾ ಹಠಾವೋ ದೇವದುರ್ಗ ಬಚಾವೋ) ಅಧಿಕಾರ ತೊಲಗಿಸಲು ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿ ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದಿಂದ ದೇವದುರ್ಗ ಕ್ಷೇತ್ರ ಹಿಂದೆ ಉಳಿದಿದೆ,ಹೆಂಡ, ಅಕ್ರಮ ಮರಳು ದಂದೆ ಹಣ ಲೂಟಿಮಾಡಿದ್ದಾರೆ, ಭ್ರಷ್ಟಾಚಾರ, ಅಧಿಕಾರ ಮಧ ಇಳಿಸುವ ಕಾಲಬಂದಿದೆ, ಎರಡು ಬಾರಿ ಸೋಲು ಕಂಡಿದ್ದು, ಕ್ಷೇತ್ರದ ಜನರ ಸೇವೆ ಮಾಡಲು ಒಮ್ಮೆ ಅವಕಾಶವನ್ನು ನೀಡಿ, ಒಂದೇ ಕುಟುಂಬಕ್ಕೆ ರಾಜಕೀಯ ಸೀಮಿತವಾಗಿದೆ. ಅದನ್ನು ಬದಲಾವಣೆ ಮಾಡಿ. ಜೆಡಿಎಸ್ ಪಂಚರತ್ನ ಯೋಜನೆಯ ಬಗ್ಗೆ ಜನರಿಗೆ ತಿಳಿಸಿ ಅದಿಕ ಮತಗಳನ್ನು ನೀಡುವಂತೆ ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್. ಸಿದ್ದನಗೌಡ ಪಾಟೀಲ ಮೂಡಲಗುಂಡ ಮಾತನಾಡಿದರು. ಶಾಸಕ ಶಿವನಗೌಡ ನಾಯಕ ಭ್ರಷ್ಟಾಚಾರ, ಅಧಿಕಾರ, ದೌರ್ಜನ್ಯ ಜನರ ಮೇಲ ಸುಳ್ಳು ಪ್ರಕರಣಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವೃತ್ತ ಶಿಕ್ಷಕ ಮುದಕಪ್ಪ ನಾಯಕ ಅರಕೇರ, ಶಿವನಗೌಡ ಕಕ್ಕಲದೋಡಿ, ಶಾಲಂ ಉದ್ದರ್ ಮಹಿಬೂಬ್ ಹೆಗ್ಗಡದಿನ್ನಿ,ಮಹೇಶಗೌಡ ಅಗ್ರಹಾರ,ಮಾಜಿ ಗ್ರಾ ಪಂ ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ರಾಮೇಶ ನಾಯಕ ಜಾಡಲದಿನ್ನಿ, ಬಸವನಗೌಡ, ಸಿರಿಯಪ್ಪ ಮುಂಡೆ, ಬಸಯ್ಯ ಪೂಜಾರಿ, ಶಿವಪ್ಪ ಮುಂಡೆ, ಬಸಪ್ಪಗೌಡ ವಿ ಎಸ್ ಎನ್ ಅಧ್ಯಕ್ಷ ರಾಮಣ್ಣ ಗೌಡ,ಬಾಲ ರಾಜ್ ಬುಡಿಗಿ, ಶಂಕ್ರಪ್ಪ ಭೋವಿ, ಲಕ್ಷ್ಮಣ ಖಾನೆ,ರಂಗಣ್ಣ ಗುಡಿಸಲ, ರವಿ,ಯಂಕಪ್ಪ ದಿಡ್ಡಿ,ಬಸವರಾಜ ಬುಡಿಗಿ, ಶಿವಪ್ಪ ಮೆಕಾನಿಕ್, ರಂಗಣ್ಣ ಕೆಬಿ, ಹನುಮೇಶ ದಾವಣಗೆರೆ,ತಾಯಪ್ಪ ಖಾನೆ, ರಾಮೇಶ ಗುಡಿಸಲ,ರಂಗಣ್ಣ ಖಾನೆ, ಬಸವರಾಜ ದೊರೆ,ರೆಡ್ಡಿ ಪುಲ್ಸ ದೋಡ್ಡಿ,ಭೂಪತಿ ದುರಗಪ್ಪ ಮಡಿವಾಳ, ಲಕ್ಷ್ಮಣ ಕಡಗೂರು, ಬಸವ ಪುಲ್ಸದೋಡ್ಡಿ,ಮೌನೇಶ ದಿಡ್ಡಿ ಶಂಕರಗೌಡ, ಶಿವು ಮರಡಿ, ನಾಗಪ್ಪ ದೇವರಮನಿ, ಆಂಜನೇಯ ಯೇಸೆ ಗರ್ಲ್ ಆಂಜಿ, ಬುಡ್ಡ ಮುಲ್ಲಾರ್,ಸಾಬಣ್ಣ ಮುಂಡೆ, ಹನುಮಯ್ಯ ಖಾನೆ, ನಾಗರಾಜ ಮಡಿವಾಳ,ರಾಮೇಶ ಬುಡಿಗಿ,ಈರಣ ಕುರು ಬುರು ಹನುಮಂತ ಕುರುಬರು ಭೀಮಣ್ಣ ಭಜಂತ್ರಿ ಸೇರಿದಂತೆ ಇನ್ನಿತರರು ಜೆಡಿಎಸ್ ಕಾರ್ಯಕರ್ತರು ಇದ್ದರು.