ಜಿ.ಎನ್. ಆಸ್ಪತ್ರೆ: ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೀದರ್: ಮಾ.13: ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ವತಿಯಿಂದ ಬೀದರ್ ತಾಲ್ಲೂಕಿನ ತಾಜಲಾಪುರ, ಕಪಲಾಪುರ(ಜೆ), ಮಾಳೆಗಾಂವ್, ಜಾಂಪಾಡ, ನಂದಗಾಂವ್, ಮಿರ್ಜಾಪುರ, ಫತೇಪುರ, ಮನ್ನಳ್ಳಿ, ಅಪದಲಪಡ್, ಸೋಲಪುರ, ಇಮಾಮಬಾದ್ ಹಳ್ಳಿ, ಗುಮ್ಮಾ ಹಾಗೂ ದದ್ದಾಪುರ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಶಿಬಿರಗಳಲ್ಲಿ ವೈದ್ಯರಾದ ಡಾ. ಸಂತೋಷ ಅಣ್ಣೆಪ್ಪನೋರ ಹಾಗೂ ಡಾ. ವಿನೋದ ಭೋರಾಳೆ ಅವರು ಸುಮಾರು 1,500ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಿದರು.

ಆರೋಗ್ಯ ರಕ್ಷಣೆಗೆ ನೆರವಾಗುವ ಜೀವನ ಕ್ರಮ ಕುರಿತು ಜನರಿಗೆ ಮಾರ್ಗದರ್ಶನ ಮಾಡಿದರು.