ಜಿ ಎಂ ಹಾಪ್‍ಕಿನ್ಸ್ ಮತ್ತು ಬಸವಣ್ಣ: ಎ ಕಂಪ್ಯಾರೆಟಿವ್ ಸ್ಟಡಿ’ಕೃತಿ ಬಿಡುಗಡೆ

ಕಲಬುರಗಿ:ಎ.2:“ಬಸವರಾಜಡೋಣೂರರ ಈ ಕೃತಿ ಭಾರತೀಯ ಸಾಹಿತ್ಯದಲ್ಲಿಒಂದು ಮೈಲುಗಲ್ಲು ಮತ್ತು ಈ ಕೃತಿಯಲ್ಲಿ ಅನೇಕ ವಿಶ್ವಾತ್ಮಕ ಸಂಗತಿಗಳು ಇವೆ. ಒಳ್ಳೆಯ ಲೇಖಕ ಒಳ್ಳೆಯ ಶಿಕ್ಷಕ ಆಗಲಾರ, ಒಳ್ಳೆಯ ಶಿಕ್ಷಕ ಒಳ್ಳೆಯ ಆಡಳಿತ ಆಗಲಾರ. ಆದರೆ ಬಸವರಾಜಡೋಣೂರ ಒಳ್ಳೆಯ ಶಿಕ್ಷಕ, ಒಳ್ಳೆಯ ಲೇಖಕ ಮತ್ತು ಒಳ್ಳೆಯ ಆಡಳಿತಗಾರ ಆಗಿದ್ದಾರೆ. ಬಸವಣ್ಣ ಈ ವಿಶ್ವಕಂಡಅದ್ಭುತ ವಿಭೂತಿ ಪುರುಷ. ಅವನ ಕುರಿತಾಗಿಇಂಗ್ಲಿμï ನಲ್ಲಿ ಒಳ್ಳೆಯ ಕೃತಿ ಪ್ರಕಟಗೊಂಡಿದೆ” ಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ ಹೇಳಿದರು. ಅವರು ಶನಿವಾರ ಬೆಂಗಳೂರಿನ ಬಸವ ಸಮಿತಿಯಲ್ಲಿ ನಡೆದಕಾರ್ಯಕ್ರಮದಲ್ಲಿ ಬಸವರಾಜಡೋಣೂರಅವರ ‘ದಿ ಪೆÇಯಟ್ರಿಆಫ್ ಜಿ ಎಂ ಹಾಪ್‍ಕಿನ್ಸ್ ಮತ್ತು ಬಸವಣ್ಣ: ಎ ಕಂಪ್ಯಾರೆಟಿವ್ ಸ್ಟಡಿ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
“ದಿ ಪೆÇಯಟ್ರಿಆಫ್ ಜಿ ಎಂ ಹಾಪ್ಕಿನ್ಸ್ ಮತ್ತು ಬಸವಣ್ಣ: ಎ ಕಂಪ್ಯಾರೇಟಿವ್‍ಕೃತಿ ಭಾರತೀಯ ಭಾμÉಗೆ ಬಸವರಾಜಡೋಣೂರ ನೀಡಿದ ಬಹುದೊಡ್ಡಕೊಡುಗೆಆಗಿದೆ. ಈ ಕೃತಿಯಲ್ಲಿಡೋಣೂರಅವರು ಅನೇಕ ಒಳನೋಟಗಳನ್ನು ನೀಡಿದ್ದಾರೆ. ಇಬ್ಬರು ಮಹತ್ವದ ಕವಿಗಳು ಮತ್ತುಆದ್ಯಾತ್ಮ ಪಿಪಾಸುಗಳ ಬಗ್ಗೆ ಅನೇಕ ಹೊಸ ಹೊಳಹುಗಳನ್ನು ನೀಡಿದ್ದಾರೆ. ಈ ಕೃತಿಕನ್ನಡಕ್ಕೆ ಅನುವಾದಗೊಳ್ಳುವ ಅಗತ್ಯವಿದೆ” ಎಂದು ನಾಡೋಜಡಾ ಮನು ಬಳಿಗಾರ ಹೇಳಿದರು.
“ಹಾಪ್‍ಕಿನ್ಸ್ ಮತ್ತು ಬಸವಣ್ಣಅವರಕಾವ್ಯದ ನಡುವೆ, ಅವರ ಬದುಕಿನ ನಡುವೆ ಅನೇಕ ಸಾಮ್ಯಗಳಿರುವಂತೆ ಭಿನ್ಮತೆಗಳೂ ಇವೆ. ಹನ್ನೆರಡನೆಯ ಶತಮಾನದ ಬಸವಣ್ಣ ಮತ್ತು 19ನೆಯ ಶತಮಾನದ ಹಾಪ್ಕಿನ್ಸ್ ಸಾಹಿತ್ಯ, ಸಮಾಜ, ಸಂಸ್ಕøತಿ, ಆಧ್ಯಾತ್ಮ ಮತ್ತುಧರ್ಮದ ಬಗ್ಗೆ ಒಂದೇರೀತಿಯಲ್ಲಿಚಿಂತನೆ ಮಾಡುತ್ತಿದ್ದರು ಎಂಬ ಸಂಗತಿ ನನ್ನನ್ನು ಆಕರ್ಷಿಸಿತು. ಬಸವಣ್ಣಕೂಡಲ ಸಂಗಮದೇವನ ಮುಂದೆತನ್ನ ವಿಚಾರ, ಆಚಾರ, ಸಮಸ್ಯೆಗಳನ್ನು ನಿವೇದನೆ ಮಾಡಿಕೊಳ್ಳುವಂತೆ ಹಾಪ್ಕಿನ್ಸ್‍ಕೂಡಕ್ರೈಸ್ತ ನ ಎದುರುತನ್ನ ಮಾನಸಿಕ ತುಮುಲ, ತನ್ನಆಧ್ಯಾತ್ಮಿಕ ಪ್ರಯಾಣದಲ್ಲಿಎದುರಿಸುತ್ತಿದ್ದ ಸಮಸ್ಯೆಗಳನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಭಾಷಿಕ, ತಾತ್ವಿಕ, ಆಧ್ಯಾತ್ಮಿಕ ಮತ್ತು ನೈತಿಕ ಸಾಮ್ಯತೆಗಳು ನನಲ್ಲಿ ಆಸಕ್ತಿ ಹುಟ್ಟಿಸಿದವು. ಇದೊಂದುತೌಲನಿಕ ಅಧ್ಯಯನ. ವಿಶ್ವ ಸಾಹಿತ್ಯದಅಧ್ಯಯನಕ್ಕೆ ಈ ಅಧ್ಯಯನ ಸಹಾಯಕಾರಿಯಾಗಲಿದೆ” ಎಂದು ಲೇಖಕ ಬಸವರಾಜಡೋಣೂರ ಹೇಳಿದರು.

ಲೇಖಕ ವಿಕ್ರಂ ವಿಸಾಜಿ ಮತ್ತುಎಚ್‍ಎಸ್ ಪ್ರಕಾಶಕೃತಿಯಕುರಿತು ಮಾತನಾಡಿದರು. ಬಸವ ಸಮಿತಿಯಅಧ್ಯಕ್ಷರಾದಅರವಿಂದಜತ್ತಿಯವರುಕಾರ್ಯಕ್ರಮದಅಧ್ಯಕ್ಷ ವಹಿಸಿದರು ಮತ್ತುಡಾಗಣಪತಿ ಶಿನ್ನೂರ ಕಾರ್ಯಕ್ರಮ ನಿರೂಪಿಸಿದರು.