ಜಿ.ಎಂ. ಶುಗರ್ಸ್ ಕಾರ್ಖಾನೆ ಆರಂಭಿಸಲು ರೈತರ ಮನವಿ

ದಾವಣಗೆರೆ.ನ.೨೫; ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕೆ.ಐ.ಎ.ಡಿ.ಬಿ. ಯು ಕೈಗಾರಿಕಾ ನಿರ್ಮಾಣಕ್ಕೆ ನೀಡಿರುವ ಭೂಮಿಯಲ್ಲಿ ಜಿ.ಎಂ.ಷುಗರ್ಸ್ ಅಂಡ್ ಎನರ್ಜಿ ಲಿ. ದಾವಣಗೆರೆ ಎಂಬ ಹೆಸರಿನ ಕಂಪನಿಯು ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಉತ್ಪಾದನೆ ಹಾಗೂ ಎಥನಾಲ್ ಘಟಕಗಳ ಆರಂಭಕ್ಕೆ ಕಾಮಗಾರಿ ನಡೆಸುತ್ತಿದ್ದು, ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಗಮನಿಸಿದಮತೆ ಕಾರ್ಖಾನೆಯ ನಿರ್ಮಾಣ ಪ್ರದೇಶದಲ್ಲಿ ಹಲವಾರು ವಿವಾದಗಳ ಬಗ್ಗೆ ವರದಿಯಾಗಿದ್ದು, ಕಂಪನಿಯು ಕಾಮಗಾರಿಯನ್ನು ಸ್ಥಗೀತಗೊಂಡಿರುವುದರಿಂದ ಕಬ್ಬನ್ನೆ ಪ್ರಮುಖ ಬೆಳೆಯನ್ನಾಗಿಸಿಕೊಂಡಿರುವ ಲಕ್ಷಾಂತರ ರೈತರಲ್ಲಿ ಆತಂಕ ಮೂಡಿದೆ. ಕಾರ್ಖಾನೆಯ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಿ ತಾಲ್ಲೂಕಿನ ರೈತರಿಗೆ ಹಾಗೂ ನಿರೋದ್ಯೋಗಿ ಯುವಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಎಂದು ಒತ್ತಾಯಿಸಿ ಚಟ್ನಿಹಳ್ಳಿ, ಕಿರಗೇರಿ, ಹಳ್ಳೂರು, ಕಡೂರು ಇತ್ಯಾದಿ ಹಳ್ಳಿಗಳ ರೈತರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಈಗಾಗಲೇ ಕೆ.ಐ.ಎ.ಡಿ.ಬಿ. ಯಿಂದ ಜಾಗ ಮಂಜೂರು ಆಗಿದ್ದು, ಜಾಗ ಪಡೆದಿರುವ ಜಿ.ಎಂ.ಷುರ‍್ಸ್ ಅಂಡ್ ಎನರ್ಜಿ ಲಿ. ಇವರು ಈಗಾಗಲೇ ರೈತರಿಗೆ ಕಬ್ಬಿನ ಬೀಜವನ್ನು ನೀಡಬೇಕಾಗಿತ್ತು. 25-30 ವರ್ಷಗಳಿಂದ ಸಕ್ಕರೆ ಕಾರ್ಖಾನೆ ಕನಸು ಕಾಣುತ್ತಿರುವ ಇಲ್ಲಿನ ರೈತರಿಗೆ ನಿರಾಸೆಯಾಗಿದೆ.ಕಾರ್ಖಾನೆ ಆರಂಭಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸಿ ಸ್ಥಳೀಯ ರೈತರಿಗೆ ತೊಂದರೆಯಾಗದಂತೆ ಕಾರ್ಖಾನೆಯ ಕೆಲಸವನ್ನು ಆರಂಭಿಸಿ ಶೀಘ್ರ ಮುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಕಾಶ್ ಗೌಡ ಪಾಟೀಲ್, ಜಗದೀಶ್ ಗೌಡ, ಅಶೋಕ್ ಗೌಡ, ಲಕ್ಕನಗೌಡ್ರು, ರೇವಣ್ಣಪ್ಪ, ವಿಜಯ ಹಳ್ಳೂರ, ರಾಮನಗೌಡ ಮೂಲಿಮನಿ, ಸಂತೋಷ್, ಪ್ರಭು ಹುಲ್ಲತ್ತಿ, ನಾಗರಾಜ್, ಪುನೀತ್, ಶರತ್, ಅಣ್ಣಪ್ಪ, ಸುನೀಲ್ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು