ಜಿ ಎಂ ಐ ಟಿ ಪಾಲಿಟೆಕ್ನಿಕ್‌ನಲ್ಲಿ ‘ಯತ್ನಿಕ್ ಡೇ ಸಂಭ್ರಮ

ದಾವಣಗೆರೆ.ಜೂ.೨; ನಗರದ  ಜಿ ಎಂ ಐ ಟಿ ಪಾಲಿಟೆಕ್ನಿಕ್‌ನಲ್ಲಿ ‘ಯತ್ನಿಕ್ ಡೇ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಎಂಹೆಚ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಓಂಕಾರಪ್ಪ ಹೆಚ್,ಎಸ್ ಉದ್ಘಾಟಿಸಿ ಮಾತಾನಾಡಿ, ವಿದ್ಯಾರ್ಥಿಗಳು ನಮ್ಮ ನೆಲದ ಕಲೆ ಮತ್ತು ಪರಂಪರೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಪ್ರಾಂಶುಪಾಲರಾದ ಡಾ ಬಿ ಆರ್ ಶ್ರೀಧರ್ ರವರು ಮಾತನಾಡಿ ವಿದ್ಯಾರ್ಥಿಗಳ ಆಸಕ್ತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರು ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥರು ಆದ  ನಿಂಗರಾಜು, ಸಿ ರವರು ಮಾತನಾಡಿ ವಿವಿಧ ವಿಭಾಗದ ಥೀಮ್‌ಗಳು ಮತ್ತು ಪ್ರಶಸ್ತಿಗಳ ವಿವರವನ್ನ ತಿಳಿಸಿದರು. ಶ್ರೀಮತಿ ಸವಿತ, ಕೆಮಿಸ್ಟಿç ವಿಭಾಗದ ಮುಖ್ಯಸ್ಥರು ಜಿ ಎಂ ಎಸ್ ಪ್ರಥಮ ದರ್ಜೆ ಕಾಲೇಜು ಮತ್ತು  ರಾಕೇಶ್ ಸಹಾಯಕ ಪ್ರಾಧ್ಯಾಪಕರು ಜಿ ಎಂ ಐ ಪಿ ಎಸ್ ಆರ್ ಕಾಲೇಜು ರವರು ತೀರ್ಪುಗಾರರಾಗಿದ್ದರು. ಜಿ ಎಂ ಐ ಟಿ ಪಾಲಿಟೆಕ್ನಿಕ್‌ನ ವಿವಿಧ ವಿಭಾಗದ ಮುಖ್ಯಸ್ಥರು, ,ಉಪನ್ಯಾಸಕರು, ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.