ಜಿವಣಗಿ ಗ್ರಾ.ಪಂ: ಅವಿರೋಧ ಆಯ್ಕೆ

ಕಮಲಾಪೂರ:ಆ.4:ಸಮೀಪದ ಜಿವಣಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಶೀಲಾ ಗಂಡ ಪುಂಡಲೀಕ್, ಉಪಾಧ್ಯಕ್ಷ ಮೊಹಮದ್ ಪಾಶ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಶೀಲಾ ಗಂಡ ಪುಂಡಲೀಕ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೊಹಮದ್ ಪಾಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶರಣಪ್ಪ ಹುಡಗಿ, ರಾಜು ಮಾಂಗ್, ಹಾಗೂ ಸತ್ತಾರ ಪಟೇಲ ಕಮಲಾಪೂರ, ಅಶೋಕ ಕಪನೂರ, ಅನೀಲ ಬಂಕೂರ, ಪುಂಡಲೀಕ ಕೋರವಾರ, ರವಿ ಡೋಣಿ, ಸೇರಿದಂತೆ ಇತರರು ಇದ್ದರು.