ಜಿಲ್ಲೆ ವಿಭಜನೆ ಹೋರಾಟ 29 ನೇ ದಿನಕ್ಕೆ

ಬಳ್ಳಾರಿ ಜ 11 : ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದು 29 ದಿನಕ್ಕೆ ಕಾಲಿಟ್ಟಿದೆ.
ಇಂದಿನ‌ ಹೋರಾಟದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘ ಬೆಂಬಲ‌ ವ್ಯಕ್ತಪಡಿಸಿ ಧರಣಿಯಲ್ಲಿ‌ ಪಾಲ್ಗೊಂಡಿತ್ತು.
ಸರ್ಕಾರದ ಜಿಲ್ಲಾ ವಿಭಜನೆ ಆದೇಶವನ್ನು ಖಂಡಿಸಿ ಹೋರಾಟಗಾರರು ಸರ್ಕಾರದ ನಿರ್ಧಾರದ ವಿರುದ್ದ ಘೋಷಣೆ ಕೂಗಲಾಯಿತು.
ರಾಜ್ಯ ಸರ್ಕಾರ ಕೆಲವರ ಸ್ವಾರ್ಥಕ್ಕೆ ಈ ಜಿಲ್ಲೆಯ ವಿಭಜನೆ ಮಾಡೋದು ಸೂಕ್ತವಲ್ಲ. ಕೂಡಲೇ ನೂತನ ವಿಜಯನಗರ ಜಿಲ್ಲೆ ರಚನೆಯನ್ನ ಕೈಬಿಡಬೇಕೆಂದು ಆಗ್ರಹಿಸಲಾಯಿತು.
ಧರಣಿಯಲ್ಲಿ ಕುರುಬ ಸಂಘದ, ಸಮುದಾಯದ ಮತ್ತು ಹೋರಾಟ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು.