ಜಿಲ್ಲೆ ವಿಭಜನೆ ಸಮರ್ಥಿಸಿಕೊಂಡ :ಕೊಂಡಯ್ಯ

ಬಳ್ಳಾರಿ ನ 19 : ಅಖಂಡ ಬಳ್ಳಾರಿ ಜಿಲ್ಲೆ ಭಾವನಾತ್ಮಕವಾಗಿ ಹಾಗೂ ಸಾಂಸ್ಕೃತಿಕವಾಗಿ ಒಂದಾಗಿದೆ. ಆದರೆ, ಆಡಳಿತಾತ್ಮಕ ವಿಚಾರವಾಗಿ ಒಂದಾಗಲು ಅಸಾಧ್ಯ. ಅದಕ್ಕಾಗಿ ಜಿಲ್ಲೆ ವಿಭಜನೆಯಾಗುವುದನ್ನು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಸಮರ್ಥಿಸಿಕೊಂಡಿದ್ದಾರೆ.

ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. ಕಳೆದ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆ ಭೌಗೋಳಿಕವಾಗಿ ಬಹು ವಿಸ್ತಾರವಾಗಿದೆ ಅದಕ್ಕಾಗಿ ಜಿಲ್ಲೆಯ ವಿಭಜನೆ ಕುರಿತು ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಅಭಿಪ್ರಾಯವನ್ನ ಕೇಳಿತ್ತು. ಅದಕ್ಕೆ ನನ್ನ ಸಮ್ಮತಿ ಇದೆ ಅಂತ ತಿಳಿಸಿತ್ತು. ಅಲ್ಲದೆ, ಜಿಲ್ಲೆಯ ವಿಭಜನೆಗೆ ನಿರ್ದಿಷ್ಟ ಕಾರಣ ಹಾಗೂ ಸಲಹೆಗಳನ್ನ ನೀಡಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. ಹೀಗಾಗಿ, ಹರಪನಹಳ್ಳಿ ತಾಲೂಕಿನವರು ನಗರ ಕೇಂದ್ರಕ್ಕಾಗಿ ಬರಲು ಬಹು ದೂರವಾಗಲಿದೆ. ಆಡಳಿತಾತ್ಮಕ ವಿಚಾರವಾಗಿ ಈ ಜಿಲ್ಲೆಯ ವಿಭಜನೆ ಅನಿವಾರ್ಯತೆ ಇದೆ. ಹೀಗಿರುವಾಗ ನಾನು ಏನು ಅಂತಾ ವಿರೋಧಿಸಲಿ, ನಾನೇ ಈ ವಿಭಜನೆಯ ಅನಿವಾರ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಈಗ ನಾನು ವಿರೋಧಿಸಿದ್ರೆ, ಸರ್ಕಾರ ಕೇಳುತ್ತಾ ಎಂದು ಕೊಂಡಯ್ಯ ಅವರು ವಿಜಯನಗರ ಜಿಲ್ಲೆ ಪರ ಬ್ಯಾಟಿಂಗ್ ಮಾಡಿದ್ದಾರೆ.