
ಬಳ್ಳಾರಿ, ಜ.04: ಜಿಲ್ಲೆ ವಿಭಜನೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದು 22 ನೇ ದಿನಕ್ಕೆ ಕಾಲಿರಿಸಿದೆ. ಇದರಲ್ಲಿ ಇಂದು
ಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಭಾಗಿಯಾಗಿತ್ತು. ನಗರದ ರಾಘವ ಕಲಾ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರಿಗೆ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನಾ ಮೆರವಣಿಗೆ ಮೂಲಕಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.ಅಸೋಸಿಯೇಷನ್ ಅಧ್ಯಕ್ಷ ಕೆ. ಕೊಟೆಶ್ವರ ರಾವ್, ಗೌರವಾಧ್ಯಕ್ಷ ಕೆ.ಚನ್ನಪ್ಪ, ಉಪಾಧ್ಯಕ್ಷ ರಗಳಾದ ಕೆ. ರಾಮಾಜೇಂನಯಲು, ಎನ್. ಬಸವರಾಜ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್ , ಜಂಟಿ ಕಾರ್ಯದರ್ಶಿ ಕೆ ಪೊಂಪನಗೌಡ , ಸದಸ್ಯರು, ಕಲಾವಿದರುಗಳಾದ ಜೆ ಪ್ರಭಾಕರ, ಕೆ ಕ್ರಷ್ಣ, ಎನ್ ಪ್ರಕಾಶ್ ,ಚೆಲ್ಲಾ ಅಮರೇಂದ್ರನಾಥ ಚೌದರಿ, ಜಿ ಗೋಪಾಲ ಕ್ರಷ್ಣ,ಎಂ ಶೇಷ ರೆಡ್ಡಿ, ಪಲ್ಲೇದ ನಾಗರಾಜ್, ಸುಬ್ಬಣ್ಣ,ಲಾಲ್ ರೆಡ್ಡಿ,ಜಿ ಆರ್ ವೆಂಕಟೇಶಲು, ದೇವಣ್ಣ, ಕೆ ಶ್ಯಾಮಸುಂದರ್, ಟಿ ಜಿ ವಿಠಲ್, ಕಪ್ಪಗಲ್ಲು ಚಂದ್ರಶೇಖರ, ನೇತಿ ರಘುರಾಮ, ವರಲಕ್ಷ್ಮಿ, ಆದೋನಿ ವೀಣಾ, ಕ್ರಷ್ಣ, ಜಿಲಾನಿ ಬಾಷ, ಶ್ರೀ ರಾಮುಲು, ರಮಣಪ್ಪ ಭಜಂತ್ರಿಸತ್ಯ ನಾರಾಯಣ, ಸುರೇಂದ್ರ ಬಾಬು ಲತಾ,ಮಹತೇಂಶ ಇನ್ನಿತರರು ಧರಣಿಯಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕವಾಗಿ ಹಿರಿಮೆ ಗರಿಮೆಯಿಂದ ಕೂಡಿದ್ದ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಿ ಎಂದು ಹೋರಾಟ ಗಾರರು ಅಭಿಪ್ರಾಯಪಟ್ಟರು.