ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ನಗರದಲ್ಲಿ ಪ್ರತಿಭಟನೆ

ಬಳ್ಳಾರಿ ನ 22 : ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ನಗರದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ  ಸರ್ಕಾರಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದ ನಾರಾಯಣರಾವ್ ಪಾರ್ಕ್ ನಿಂದ ಬೆಳಿಗ್ಗೆ  11ಗಂಟೆಗೆ ಆರಂಭಗೊಂಡು‌ ಗಡಗಿ ಚೆನ್ನಪ್ಪ ವೃತ್ತದ‌ ಮೂಲಕ  ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲೆ ವಿಭಜಿಸಿ‌ ನೂತನ ವಿಜಯನಗರ ಜಿಲ್ಲೆ ರಚನೆ ಅಗತ್ಯತೆ ಇಲ್ಲ ಎಂಬ ಬಗ್ಗೆ ಅರಿವು‌ಮೂಡಿಸುವ ಮನವಿ ಪತ್ರವನ್ನು ಮುಖ್ಯ ಮಂತ್ರಿಗಳಿಗೆ ಜಿಲ್ಲಾಡಳಿಕ್ಕೆ ಸಲ್ಲಿಸಲಿದೆ.ಈ ಹೋರಾಟದಲ್ಲಿ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗಾರಜ್, ಸಾ.ರಾ.ಗೋವಿಂದ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಅದಕ್ಕಾಗಿ ಇಂದು ನಾರಾಯಣ ರಾವ್ ಪಾರ್ಕ್ ನಲ್ಲಿ  ಹೋರಾಟ ಸಮಿತಿಯ ಮುಖಂಡರುಗಳಾದ ದರೂರು ಪುರುಷೋತ್ತಮಗೌಡ, ಕುಡುತಿನಿ ಶ್ರೀನಿವಾಸ್, ಕೆ.ಎರ್ರಿಸ್ವಾಮಿ, ಚಾನಾಳ್ ಶೇಖರ್,  ಸಿದ್ಮಲ್ ಮಂಜುನಾಥ,  ಮೋಹನ್, ಉಪ್ಪಾರ ಹನುಮೇಶ್, ಗಂಗಾವತಿ ವೀರೇಶ್, ಬಿಸಲಳ್ಳಿ ವೀರೇಶ್, ಇರ್ಷಾದ್, ಕಪ್ಪಗಲ್ ಚಂದ್ರಶೇಖರ ಆಚಾರ್, ಪ್ರಭುಕುಮಾರ್, ಬಂಡೇಗೌಡ, ಮಸ್ತಾನ್, ಕಪ್ಪಗಲ್ ರಸೂಲ್ ಸಾಬ್ ಮೊದಲಾದವರು ಚರ್ಚಿಸಿದರು.
ಈ ಸಂದರ್ಭದಲ್ಲಿ ಕೆಲವರು‌ ನಾವು ದಿಟ್ಟ ಹೋರಾಟ ಮಾಡುವ ಸರ್ಕಾರಕ್ಕೆ ಎಚ್ಚರಿಕೆ ತರುವ ರೀತಿಯಲ್ಲಿ ಹೋರಾಟ ಮಾಡುವ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೋರಾಟಕ್ಕೆ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ನಾವು ಹೆದರದೆ, ಬೆದರದೆ ಜೈಲಿಗೆ ಕಳಿಸದರೂ ಬೇಲ್ ತೆಗೆದುಕೊಳ್ಳದೆ ಅಲ್ಲಿಯೇ ಇರುವ ಎಂದರು.