ಜಿಲ್ಲೆ ವಿಭಜನೆ ವಿರೋಧಿಸಿ ನ. 26 ಕ್ಕೆ ಬಳ್ಳಾರಿ ಬಂದ್ ಗೆ ಕರೆ

ಬಳ್ಳಾರಿ, ನ.19: ಜಿಲ್ಲೆ ವಿಭಜನೆ ವಿರೋಧಿಸಿ ನ 26 ರಂದು ಬಳ್ಳಾರಿ ಬಂದ್ ನಡೆಸಲು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದೆ.
ಸಮಿತಿಯ ಮುಖಂಡರುಗಳಾದ ಕುಡತಿನಿ ಶ್ರೀನಿವಾಸ್, ದರೂರು ಪುರುಷೋತ್ತಮ ಗೌಡ, ಚಾನಳ ಶೇಖರ್, ಬಸವರಾಜ್ ಮೊದಲಾದವರು ಇಂದು‌ನಗರದ ಪತ್ಇಕಾ ಭವನದಲ್ಲಿ‌ ಸುದ್ದಿಗೋಷ್ಟಿ ನಡೆಸಿ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ತಮ್ಮ ಭೂಮಿಗೆ ಬೇಡಿಕೆ ಹೆಚ್ಚಿಸಿಕೊಂಡು ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಬಳ್ಳಾರಿಯನ್ನು ವಿಭಜಿಸಿ, ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಅವರು. ಇದನ್ನು ವಿರೋಧಿಸಿ ಮುಂದಿನ ಗುರುವಾರ ನ 26 ರಂದು ಬಳ್ಳಾರಿ ಬಂದ್ ಆಚರಿಸಲಾಗುವುದೆಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರವನ್ನು ಪ್ರತ್ಯೇಕ ಮಾಡುವ ನಿರ್ಣಯ ಏಕಪಕ್ಷೀಯವಾಗಿದೆಂದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಬೆಂಬಲ ಸೂಚಿಸಿದ್ದಾರೆ. ಇದರ ಹಿಂದೆ ರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಆಸೆ ಇದೆ. ಅದಕ್ಕಾಗಿ‌ ಬೆಂಬಲ ನೀಡಿದ್ದಾರೆ ಎಂದರು.
ಸೋಮಶೇಖರ ರೆಡ್ಡಿ ಅವರು ಅಖಂಡ ಜಿಲ್ಲೆ ಉಳಿಸಲು ಜನ ಹೋರಾಟ ಮಾಡಿದರೆ ನಾನು ಬೆಂಬಲಿಸುವೆ ಎಂದು ಹೇಳಿದ್ದಾರೆ. ಇದನ್ನು ನಾವು ಒಪ್ಪಲ್ಲ. ಅಚರು‌ಮುಂದೆ ಬಂದು‌ನಿಲ್ಲಬೇಕು.ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ,ಕೆ.ಸಿ. ಕೊಂಡಯ್ಯ, ಸಂಸದರಾದ ದೇವೇಂದ್ರಪ್ಪ, ನಾಸೀರ್ ಹುಸೇನ್ ರ ಬೆಂಬಲವನ್ನು‌ನಾವು ಕೆಳಲಿದ್ದೇವೆ. ಎಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕು ಎಂಬುದು ನಮ್ಮ ಒತ್ತಾಸೆ ಎಂದರು.