ಜಿಲ್ಲೆ ವಿಭಜನೆ ವಿರುದ್ದ ಹೋರಾಟಕ್ಕೆ ಸಂಘ ಸಂಸ್ಥೆಗಳು ಸಜ್ಜು

ಬಳ್ಳಾರಿ ನ 18 : ಜಿಲ್ಲೆ ವಿಭಜನೆ ವಿರುದ್ದ ಮತ್ತು ಸಮಗ್ರ ಜಿಲ್ಲೆಗಾಗಿ‌ ಆಗ್ರಹಿಸಿ ಸರ್ಕಾರದ ವಿರುದ್ದ ಹೋರಾಟ ಮಾಡಲು ಬಳ್ಳಾರಿ ನಗರದ ವಿವಿಧ ಸಂಘಟನೆಗಳು ಸಜ್ಜುಗೊಳ್ಳುತ್ತಿವೆ.
ಇಂದು ಸಂಜೆ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ
ಹೋರಾಟಗಾರರು ಬಳ್ಳಾರಿ ವಿಭಜನೆಯ ಕುರಿತು ಹಾಗೂ ಮುಂದಿನ ಹೋರಾಟಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಾಳೆ ಹೋರಾಟದ ರೂಪುರೇಷಗಳ ಕುರಿತು ಮಾಧ್ಯಮಗಳಿಗೆ ತಿಳಿಸಲಿದ್ದು. ನಾಡಿದ್ದರಿಂದ ವಿವಿಧ ರೀತಿಯಲ್ಲಿ ಹೋರಾಟ ಮಾಡಲು ನಿರ್ಧರಿಸಿದೆ.
ಬಳ್ಳಾರಿ ಭಾಗದ ಶಾಸಕರು ವಿಧಾನ‌ ಪರಿಷತ್ ಸದಸ್ಯರು‌ ಅಖಂಡ ಜಿಲ್ಲೆಗಾಗಿ ರಾಜೀನಾಮೆ ನೀಡಬೇಕೆಂದು ಅವರ ಮನೆ ಮುಂದೆ ಹೋರಾಟ ಮಾಡಲು. ಮುಖ್ಯ‌ಮಂತ್ರಿಗೆ ಪ್ರತಿಭಟನೆ ಮೂಲಕ‌ ಮನವಿ ಸಲ್ಲಿಸುವುದು, ಬಳ್ಳಾರಿ ಬಂದ್ ಮಾಡುವುದು ಸಾಧ್ಯವಾದರೆ ಮುಖ್ಯ‌ಮಂತ್ರಿಗಳ ಬಳಿಯೇ ನಿಯೋಗ ಹೋಗಿ‌ ಜಿಲ್ಲೆ ವಿಭಜನೆ ಮಾಡದಂತೆ ಒತ್ತಾಯಿಸುವುದು ಸೇರಿದಂತೆ ಹಲವು ರೀತಿಯ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಮುಖಂಡರುಗಳಾದ ದರೂರು ಪುರುಷೋತ್ತಮಗೌಡ, ಟಪಾಲ್ ಗಣೇಶ್, ಚಾನಾಳ್ ಶೇಖರ್, ಕುಡುತಿನಿ‌ ಶ್ರೀನಿವಾಸ್, ಬಸವರಾಜ್ ಬಿಸಲಹಳ್ಳಿ, ಗೌರಿಶಂಕರ ಸ್ವಾಮಿ, ಪಂಪಾಪತಿ, ಮೊದಲಾದವರು ಪಾಲ್ಗೊಂಡಿದ್ದರು.
ಈ‌ ಹಿಂದೆ ಬಳ್ಳಾರಿ ಯನ್ನು ಆಂದ್ರ ಪ್ರದೇಶಕ್ಕೆ ಸೇರಿಸಬೇಕೆಂಬ ಬೇಡಿಕೆ ಬಂದಾಗ ಅದರ ವಿರುದ್ದ ಎಲ್ಲರು‌ ಒಗ್ಗೂಡಿ ಹೋರಾಟ ಮಾಡಿದಂತೆ ಮಾಡಬೇಕೆಂಬ ಅನಿವಾರ್ಯತೆ ಇದೆ.