ಜಿಲ್ಲೆ ವಿಭಜನೆ ಖಂಡಿಸಿ ಬಳ್ಳಾರಿಯಲ್ಲಿ ಮುಂಬತ್ತಿ ಮೆರವಣಿಗೆ

ಬಳ್ಳಾರಿ ನ 20 : ಜಿಲ್ಲೆ ವಿಭಜನೆ ವಿರೋಧಿಸಿ ಇಂದು ಸಂಜೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಗರದಲ್ಲಿ ಮುಂಬತ್ತಿ ಮೆರವಣಿಗೆ ನಡೆಸಿತು.
ನಗರದ ಈಡಿಗ ಹಾಸ್ಟಲ್ ನಿಂದ ಗಡಗಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಸಮಿತಿಯ ಮುಖಂಡರುಗಳಾದ ದರೂರು ಪುರುಷೋತ್ತಮಗೌಡ, ಕುಡತಿನಿ ಶ್ರೀನಿವಾಸ್, ಸಿದ್ಮಲ್ ಮಂಜುನಾಥ, ಜಾಲಿಹಾಳ್ ಶ್ರೀಧರ್ ಮೊದಲಾದವರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಜನರನ್ನು, ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರ ಏಖ ಮುಖವಾಗಿ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು ಒಬ್ಬ ಆನಂದ್ ಸಿಂಗ್ ಅವರಿಗಾಗಿ‌ ವಿಜಯನಗರ ಜಿಲ್ಲೆ ರಚನೆ ಬೇಡ, ಅದರಲ್ಲಿ ಅವರ ಸ್ವಾರ್ಥ ಅಡಗಿದೆ ಅದನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಬಳ್ಳಾರಿ ಬಂದ್ ಸೇರಿದಂತೆ ಉಗ್ರ ಸ್ವರೂಪದ ಹೋರಾಟ ಎದುರಿಸ ಬೇಕಾಗುತ್ತದೆ ಎಂದರು