ಜಿಲ್ಲೆ : ವಾರದ ಆರು ದಿನ ಲಾಕ್ ಡೌನ್ ಮುಂದುವರಿಕೆ – ಸವದಿ

ರಾಯಚೂರು.ಮೇ.೧೮- ಜಿಲ್ಲೆಯಲ್ಲಿ ವಾರಕ್ಕೆ ಒಂದು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿ, ಉಳಿದಂತೆ ೬ ದಿನಗಳು ಪೂರ್ಣ ಪ್ರಮಾಣದ ಲಾಕ್ ಡೌನ್ ನಿಯಮ ಜಿಲ್ಲೆಯಲ್ಲಿ ಮಾತ್ರ ಮುಂದುವರೆಸಲಾಗುತ್ತದೆಂದು ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರಿಂದು ಕೃಷಿ ವಿಶ್ವವಿದ್ಯಾಲಯದ ಕ್ವಾರಂಟೈನ್ ಸೇಂಟರ್ ಪರಿಶೀಲನೆ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾರದ ಮೂರು ದಿನಗಳು ಪೂರ್ಣ ಪ್ರಮಾಣದ ಲಾಕ್ ಡೌನ್ ಅನುಸರಿಸಲಾಗುತ್ತದೆ. ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ. ಮತ್ತೇ ನಂತರ ಮೂರು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ. ಇದು ಜಿಲ್ಲೆಯಲ್ಲಿ ಮುಂದುವರೆಸಲಾಗುತ್ತದೆ. ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಆದರೆ, ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ನಿನ್ನೆ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಮಾಲೋಚನೆ ನಡೆಸಲಾಯಿತು. ಜಿಲ್ಲೆಯ ಸಂಪೂರ್ಣ ಸ್ಥಿತಿಗತಿ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.
ಕೊರೊನಾ ಸೋಂಕಿತರು ಮನೆಯಲ್ಲಿಯೇ ಉಳಿಯದೇ, ಕ್ವಾರಂಟೈನ್ ಕೇಂದ್ರಗಳಿಗೆ ಬರುವಂತಾಗಬೇಕು. ನಿರೀಕ್ಷಿತ ಪ್ರಮಾಣದಲ್ಲಿ ಜನ ಬಾರದಿರುವುದರಿಂದ ಜಿಲ್ಲಾಡಳಿತ, ನಾನು ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಅಧಿಕಾರಿಗಳು ಮತ್ತು ಪೊಲೀಸರನ್ನು ಹೊರತು ಪಡಿಸಿ, ಬಲವಂತವಾಗಿ ಅವರನ್ನು ಕೊರೊನಾ ಕೇಂದ್ರಕ್ಕೆ ಕರೆತರಬೇಕಾಗುತ್ತದೆ. ಇದರಿಂದ ಕೊರೊನಾ ಹರಡುವಿಕೆ ಪ್ರಮಾಣ ತಡೆಯಲು ಸಾಧ್ಯವಾಗುತ್ತದೆಂದು ಹೇಳಿದರು.
ಕೊರೊನಾಕ್ಕೆ ಅಗತ್ಯವಾದ ಎಲ್ಲಾ ಚಿಕಿತ್ಸಾ ಸೌಕರ್ಯಗಳನ್ನು ಸಿದ್ಧಗೊಳಿಸಲಾಗಿದೆ. ಯಾವುದೇ ಆತಂಕ ಬೇಡ. ಕೊರೊನಾ ಸೋಂಕಿತರಿಗೆ ಗುಣಮುಖರಾಗುವ ಉತ್ತಮ ಚಿಕಿತ್ಸೆ ನೀಡಲಾಗುತ್ತದೆಂದರು.