ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ 20 ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ : ಅಂತಿಮ ಕಣದಲ್ಲಿ 95 ಅಭ್ಯರ್ಥಿಗಳು

ವಿಜಯಪುರ:ಎ.25: ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯ 8 ಮತಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ 122 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡು 115 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯುವ ದಿನವಾದ ಇಂದು ಒಟ್ಟು 20 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಒಟ್ಟು 95 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಹಿಂಪಡೆಯಲು ಕೊನೆಯದಿನವಾದ ಏ.24ರ ಸೋಮವಾರÀ ಮುದ್ದೇಬಿಹಾಳ ಮತಕ್ಷೇತ್ರದಿಂದ 01, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 01, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 08, 30-ಬಿಜಾಪುರ ನಗರ ಮತಕ್ಷೇತ್ರದಿಂದ 01, 31-ನಾಗಠಾಣ ಮತಕ್ಷೇತ್ರದಿಂದ 04, 32-ಇಂಡಿ ಮತಕ್ಷೇತ್ರದಿಂದ 02 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 02 ಸೇರಿದಂತೆ ಒಟ್ಟು 20 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ವಿಧಾನಸಭಾವಾರು ವಿವರದಂತೆ ಜಿಲ್ಲೆಯ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸಿದ್ದಪ್ಪ ವಾಲೀಕಾರ (ಪಕ್ಷೇತರ) 27-ದೇವರಹಿಪ್ಪರಗಿ ಮತಕ್ಷೇತ್ರದಿಂದ ಬಾಪುಗೌಡ ಮಲ್ಲನಗೌಡ ಪಾಟೀಲ (ಪಕ್ಷೇತರ) ಹಾಗೂ 28-ಬಸವನಬಾಗೇವಾಡಿ ಮತಕ್ಷೇತ್ರದಿಂದ ಸಂಯುಕ್ತಾ ಪಾಟೀಲ (ಪಕ್ಷೇತರ) ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
29-ಬಬಲೇಶ್ವರ ಮತಕ್ಷೇತ್ರದಿಂದ ಇಮಾಮಜಾಫರ್ ತಿಡಗುಂದಿ (ಪಕ್ಷೇತರ) ಮೈಬೂಬ ಮುಲ್ಲಾ (ಪಕ್ಷೇತರ) ಯಾಸೀನ ಜವಳಿ (ಪಕ್ಷೇತರ), ಜಗದೀಶ ಮಲ್ಲಪ್ಪ ಬಿಸಿರೊಟ್ಟಿ (ಸರ್ವ ಜನತಾ ಪಾರ್ಟಿ), ಕೃಷ್ಣಾ ಚವ್ಹಾಣ (ಭಾರತೀಯ ಬೆಳಕು ಪಾರ್ಟಿ), ಸಂಗಪ್ಪ ಇಂಡಿ (ಪಕ್ಷೇತರ), ಸಂಗಯ್ಯ ಮರಿಮಠ (ಪಕ್ಷೇತರ) ಹಾಗೂ ಮಹಾದೇವ ಪವಾರ (ಪಕ್ಷೇತರ) ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
30-ಬಿಜಾಪುರ ನಗರ ಮತಕ್ಷೇತ್ರದಿಂದ ಐಜಾಜ ಅಹ್ಮದ ಜಾಗೀರದಾರ (ಪಕ್ಷೇತರ), 31-ನಾಗಠಾಣ ಮತಕ್ಷೇತ್ರದಿಂದ ಅರ್ಜುನ ಬಂಡಿ (ಪಕ್ಷೇತರ), ಮಹೇಂದ್ರಕುಮಾರ ನಾಯಕ (ಪಕ್ಷೇತರ), ಶಂಕರ ಪೂಜೇರಿ (ಪಕ್ಷೇತರ) ಹಾಗೂ ರವೀಂದ್ರ ಕಟ್ಟಿಮನಿ (ಪಕ್ಷೇತರ) ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
32-ಇಂಡಿ ಮತಕ್ಷೇತ್ರದಿಂದ ಶಿವಶರಣ @ಶಿವಶರಣಪ್ಪ ಜೆಟ್ಟೆಪ್ಪ ವಾಲೀಕಾರ (ಜೈ ಮಹಾಭಾರತ ಪಾರ್ಟಿ) ಹಾಗೂ ಮಹೇಬೂಬ ಅಬ್ದುಲಗನಿಸಾಬ ಅರಬ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
33-ಸಿಂದಗಿ ಮತಕ್ಷೇತ್ರದಿಂದ ಅಮೀರಮಜಾ ಚೌದರಿ (ಪಕ್ಷೇತರ) ಹಾಗೂ ಅಕ್ಬರ ಖಾಜಾಸಾಬ ಮುಲ್ಲಾ (ಪಕ್ಷೇತರ) ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದಿರುವ 95 ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಎ.ಎಸ್. ಪಾಟೀಲ ನಡಹಳ್ಳಿ (ಭಾರತೀಯ ಜನತಾ ಪಾರ್ಟಿ), ಕೆ.ಬಿ.ದೊಡಮನಿ (ಬಹುಜನ ಸಮಾಜ ಪಾರ್ಟಿ), ಬಸವರಾಜ ಭೀಮಣ್ಣ ಭಜಂತ್ರಿ (ಜನತಾದಳ ಸೆಕ್ಯೂಲರ್), ಮೆಹಬೂಬ ಶಬ್ಬೀರಅಹ್ಮದ ಹಡಲಗೇರಿ (ಆಮ ಆದ್ಮಿ ಪಾರ್ಟಿ), ಜಾಕೀರ ಹುಸೇನ್ ಉಸ್ಮಾನ ಲಾಹೋರಿ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ), ದೀಪಾ ಮಹಾಂತಪ್ಪ ಮಣೂರ (ಕರ್ನಾಟಕ ರಾಷ್ಟ್ರ ಸಮಿತಿ), ರಾಮನಗೌಡ ಎಸ್. ಬಾಳವಾಡ (ರಾಷ್ಟ್ರೀಯ ಜನಸಂಭವನ ಪಾರ್ಟಿ ಅವರು ಸೇರಿದಂತೆ ಒಟ್ಟು 08 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬಸಲಿಂಗಪ್ಪ ಉರ್ಫ ಬಸಲಿಂಗಪ್ಪಗೌಡ ತಂದೆ ಬಸವಂತರಾಯ ಇಂಗಳಗಿ (ಆಮ್ ಆದ್ಮಿ ಪಾರ್ಟಿ), ಭೀಮನಗೌಡ ಪಾಟೀಲ (ರಾಜುಗೌಡ) ಬಸನಗೌಡ ಪಾಟೀಲ (ಜನತಾದಳ ಜಾತ್ಯತೀತ), ರಾಜು ಮಾದರ (ಗುಬ್ಬೇವಾಡ) (ಬಹುಜನ ಸಮಾಜ ಪಾರ್ಟಿ), ಸುಣಗಾರ ಶರಣಪ್ಪ ತಿಪ್ಪಣ್ಣ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಸೋಮನಗೌಡ ಬ. ಪಾಟೀಲ ಸಾಸನೂರ (ಭಾರತೀಯ ಜನತಾ ಪಾರ್ಟಿ), ಗುರುಶಾಂತವೀರ ಸ್ವಾಮಿಜಿ ಹಿರೇಮಠ ಇಟಗಿ (ಕರ್ನಾಟಕ ಜನಸೇವೆ ಪಾರ್ಟಿ), ಬೇವಿನಕಟ್ಟಿ ಗೈಬಪ್ಪ ಭೀಮಪ್ಪ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ), ಮನಸೂರಬಾಬ ನಬಿಸಾಹೇಬ ಬೀಳಗಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ), ಶಿವಾನಂದ ಯಡಹಳ್ಳಿ (ಕೊಂಡಗೂಳಿ) (ಕರ್ನಾಟಕ ರಾಷ್ಟ್ರ ಸಮೀತಿ), ದುಂಡಸಿ ಅಬ್ದುಲರಹಿಮಾನ ಮಹ್ಮದಹನೀಫ್ (ಪಕ್ಷೇತರ), ಕೆಂಪೇಗೌಡ ಈರಣಗೌಡ ಕೇಶಪ್ಪಗೋಳ (ಪಕ್ಷೇತರ), ಭೀಮನಗೌಡ ಬಸನಗೌಡ ಪಾಟೀಲ (ಪಕ್ಷೇತರ) ಹಾಗೂ ಶ್ರೀಶೈಲ ರುದ್ರಪ್ಪ ಕಕ್ಕಳಮೇಲಿ (ಪಕ್ಷೇತರ) ಅವರು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
28-ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಗುರುಬಸಪ್ಪ ಬಸಪ್ಪ ಢವಳಗಿ (ಬಹುಜನ ಸಮಾಜ ಪಾರ್ಟಿ), ಶಿವಾನಂದ ಪಾಟೀಲ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಅಪ್ಪುಗೌಡ ಉರ್ಫ ಸೋಮನಗೌಡ ಬಸನಗೌಡ ಪಾಟೀಲ (ಜನತಾದಳ ಜಾತ್ಯತೀತ), ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ (ಭಾರತೀಯ ಜನತಾ ಪಾರ್ಟಿ), ಅಲ್ಲಾಬಕ್ಷ ಬಿಜಾಪುರ (ಆಲ್ ಇಂಡಿಯಾ ಮಜಲಿಸ್-ಇ-ಇತಿಹಾದುಲ್ ಮುಸ್ಲಿಮಿನ್), ಜಮೀರಅಹ್ಮದ ಇನಾಂದಾರ (ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ), ನಾರಾಯಣ ನೀಲಕಂಠ ರಾಠೋಡ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಪ್ರವೀಣಕುಮಾರ ರಾಯಗೊಂಡ (ಮುತ್ತಗಿ) (ಕರ್ನಾಟಕ ರಾಷ್ಟ್ರ ಸಮಿತಿ), ವಿದ್ಯಾ ಬಿರಾದಾರ (ಐರಾ ನ್ಯಾಷನಲ್ ಪಾರ್ಟಿ), ಅವಟಿ ಶಂಕರೆಪ್ಪ ಕಾಶೀನಾಥ (ಉತ್ತಮ ಪ್ರಜಾಕೀಯ ಪಾರ್ಟಿ), ರಾಜೇಶ್ವರಿ ರಾಜಶೇಖರ ಯರನಾಳ (ಪಕ್ಷೇತರ), ಲಕ್ಷಿಂಬಾಯಿ ಎಸ್.ಜಿ.ಪಾಟೀಲ (ಪಕ್ಷೇತರ), ಸಂಗಪ್ಪ ಚಂದು ಲಮಾಣಿ (ಪಕ್ಷೇತರ) ಅವರು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ಗಂಗನಳ್ಳಿ ಕಾಮಣ್ಣ ಸಿದ್ದಪ್ಪ (ಆಮ್ ಆದ್ಮಿ ಪಾರ್ಟಿ), ಬಸವರಾಜ ಹೊನವಾಡ (ಜನತಾ ದಳ ಜಾತ್ಯಾತೀತ), ಎಂ.ಬಿ.ಪಾಟೀಲ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಮೆಹಬೂಬ ಮಲಬೋಡಿ (ಬಹುಜನ ಸಮಾಜ ಪಾರ್ಟಿ), ವಿಜಯಕುಮಾರ (ವಿಜಯಗೌಡ) ಪಾಟೀಲ (ಭಾರತೀಯ ಜನತಾ ಪಾರ್ಟಿ), ರವಿಚಂದ್ರ ತಮ್ಮಣ್ಣ ಡೊಂಬಾಳಿ (ರಾಷ್ಟ್ರೀಯ ಸಮಾಜ ಪಕ್ಷ), ಎಸ್.ಎಂ.ಗಾಂಜಿ (ಉಪ್ಪಾರ) (ಉತ್ತಮ ಪ್ರಜಾಕೀಯ ಪಕ್ಷ), ಸುನೀಲ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ದುಂಡಸಿ ಅಬ್ದುಲರಹಿಮಾನ ಮಹ್ಮದಹನೀಫ್ (ಪಕ್ಷೇತರ), ಜ್ಯೋತಿಬಾ ಸಾಳುಂಕೆ (ಪಕ್ಷೇತರ), ತಳೇವಾಡ ಪಾಟೀಲ (ಪಕ್ಷೇತರ), ಭೀರಪ್ಪ ಮಾಳಪ್ಪ ಸೋಡ್ಡಿ (ಪಕ್ಷೇತರ), ಮೋತಿರಾಮ ಧರ್ಮು ಚವ್ಹಾಣ (ಪಕ್ಷೇತರ), ಮಂಜುಳಾ ಕಿಶನ ಚವ್ಹಾಣ (ಪಕ್ಷೇತರ) ಅವರು ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
30-ಬಿಜಾಪುರ ನಗರ ಮತಕ್ಷೇತ್ರದಲ್ಲಿ ಅಬ್ದುಲ ಹಮೀದ ಖಾಜಾಸಾಬ ಮುಶರೀಫ್ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್), ಬಸನಗೌಡ ರಾ. ಪಾಟೀಲ (ಯತ್ನಾಳ) (ಭಾರತೀಯ ಜನತಾ ಪಾರ್ಟಿ), ಬಂದೇನವಾಜ ಹುಸೇನಸಾಬ ಮಹಾಬರಿ (ಜನತಾ ದಳ ಜಾತ್ಯಾತೀತ), ಕೆಂಗನಾಳ ಮಲ್ಲಿಕಾರ್ಜುನ ಭೀಮಪ್ಪ (ಬಹುಜನ ಸಮಾಜ ಪಾರ್ಟಿ), ಹಾಸಿಂಪಿರ ಈ. ವಾಲಿಕಾರ (ಆಮ್ ಆದ್ಮಿ ಪಾರ್ಟಿ), ಮಲ್ಲಿಕಾರ್ಜುನ ಎಚ್.ಟಿ. (ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್), ರಾಕೇಶ ಇಂಗಳಗಿ (ಹಾಲಹಳ್ಳಿ) (ಕರ್ನಾಟಕ ರಾಷ್ಟ್ರ ಸಮಿತಿ), ಸತೀಶ ಅಶೋಕ ಪಾಟೀಲ (ಶಿವಸೇನಾ ಉದ್ಧವ ಬಾಳಾಸಾಹೇಬ ಠಾಕ್ರೆ), ಈರಪ್ಪಾ ಕುಂಬಾರ (ಪಕ್ಷೇತರ), ಕಡೇಚೂರ ಕಲ್ಲಪ್ಪ ರೇವಣಸಿದ್ದಪ್ಪ (ಪಕ್ಷೇತರ), ಚಂದ್ರಗಿರಿ ಹೊನ್ನದ (ಪಕ್ಷೇತರ), ಮೋತಿರಾಮ ಧರ್ಮು ಚವ್ಹಾಣ (ಪಕ್ಷೇತರ), ಮೋದಿನಸಾಬ ಬಂದಗಿಸಾಬ ಅಂಕಲಗಿ (ಪಕ್ಷೇತರ) ಹಾಗೂ ರಾಜು ಯಲ್ಲಪ್ಪ ಪವಾರ (ಪಕ್ಷೇತರ) ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
31-ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ ಕಲ್ಲಪ್ಪ ತೊರವಿ (ಬಹುಜನ ಸಮಾಜ ಪಾರ್ಟಿ), ಗುರು ಮುನ್ನು ಚವ್ಹಾಣ (ಆಮ ಆದ್ಮಿ ಪಾರ್ಟಿ), ದೇವಾನಂದ ಫೂಲಸಿಂಗ್ ಚವ್ಹಾಣ (ಜನತಾದಳ ಜಾತ್ಯಾತೀತ), ಕಟಕಧೋಂಡ ವಿಠ್ಠಲ ಧೋಂಡಿಬಾ (ಇಂಡಿಯನ್ ರಾಷ್ಟ್ರೀಯ ಕಾಂಗ್ರೆಸ್), ಸಂಜೀವ ಮಳಸಿದ್ದಪ್ಪ ಐಹೊಳೆ (ಭಾರತೀಯ ಜನತಾ ಪಾರ್ಟಿ), ಕಟಕಧೋಂಡ ಕವಿತಾ ವ್ಹಿ.ಡಿ. (ರಾಣಿ ಚನ್ನಮ್ಮ ಪಾರ್ಟಿ), ಕುಲಪ್ಪ ಭೀಮು ಚವ್ಹಾಣ (ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ), ಭಾರತಿ ಕಾಲೇಬಾಗ (ಸಾರ್ವಜನಿಕ ಆದರ್ಶ ಸೇನಾ), ವಿಕ್ರಮ ವಾಗೋಮೋರೆ (ಜಿಗಜೇವಣಿ) (ಕರ್ನಾಟಕ ರಾಷ್ಟ್ರ ಸಮಿತಿ), ವ್ಹಿ.ಡಿ. ಕಟಕಧೋಂಡ (ಹಿಂದೂಸ್ತಾನ ಜನತಾ ಪಾರ್ಟಿ), ಬಂಡಿ ಶ್ರೀಕಾಂತ ಹಣಮಂತಪ್ಪ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಅರುಣಾ ಗಂ. ಕಟಕಧೋಂಡ (ಪಕ್ಷೇತರ), ಶಂಕರ ಚವ್ಹಾಣ (ಪಕ್ಷೇತರ), ಸುನೀಲ ಚವ್ಹಾಣ (ಪಕ್ಷೇತರ), ಸಂಜೀವ ಪುಂಡಲೀಕ ಮಾನೆ (ಪಕ್ಷೇತರ), ಅವರು ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಸುಗೌಡ ಈರಪ್ಪಗೌಡ ಬಿರಾದಾರ (ಭಾರತೀಯ ಜನತಾ ಪಾರ್ಟಿ), ಗೋಪಾಲ ಆರ್. ಪಾಟೀಲ (ಆಮ್‍ಆದ್ಮಿ ಪಾರ್ಟಿ), ನಾಗೇಶ ಶಿವಶರಣ (ಬಹುಜನ ಸಮಾಜ ಪಾರ್ಟಿ), ಬಿ.ಡಿ.ಪಾಟೀಲ (ಹಂಜಗಿ) (ಜನತಾದಳ ಜಾತ್ಯಾತೀತ), ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಅಶೋಕ ಜಾಧವ (ಕರ್ನಾಟಕ ರಾಷ್ಟ್ರ ಸಮಿತಿ), ಕವಿತಾ. ಶ್ರೀ. ಕಟಕದೊಂಡ (ರಾಣಿ ಚನ್ನಮ್ಮ ಪಾರ್ಟಿ), ಎಂ.ಎಂ. ಬಾಗವಾನ (ಪಕ್ಷೇತರ) ಹಾಗೂ ಗೊಲ್ಲಾಳ ನಿಂಗನಗೌಡ ಜ್ಯೊತಿಗೊಂಡ (ಪಕ್ಷೇತರ) ಅವರು ಸೇರಿದಂತೆ ಒಟ್ಟು 09 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
33-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಅಶೋಕ ಮಲ್ಲಪ್ಪ ಮನಗೂಳಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಡಾ. ದಸ್ತಗೀರ ಮುಲ್ಲಾ (ಬಹುಜನ ಸಮಾಜ ಪಾರ್ಟಿ), ಭೂಸನೂರ ರಮೇಶ ಬಾಳಪ್ಪ (ಭಾರತೀಯ ಜನತಾ ಪಾರ್ಟಿ), ಮುರಿಗೆಪ್ಪಗೌಡ ಸಿ.ರದ್ದೇವಾಡಗಿ (ಆಮ್ ಆದ್ಮಿ ಪಾರ್ಟಿ), ವಿಶಾಲಾಕ್ಷಿ ಶಿವಾನಂದ ಪಾಟೀಲ (ಜನತಾದಳ ಜಾತ್ಯಾತೀತ), ಪುಂಡಲೀಕ ಬಿರಾದಾರ (ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷ), ಜೀಲಾನಿ ಗುಡುಸಾಬ ಮುಲ್ಲಾ (ಪಕ್ಷೇತರ), ದೀಪಿಕಾ ಎಸ್. (ಪಕ್ಷೇತರ) ಹಾಗೂ ಮೊಹಮ್ಮದ ಮುಶ್ತಾಕ ಅಮೀನೋದ್ದಿನ ನಾಯ್ಕೊಡಿ (ಪಕ್ಷೇತರ) ಅವರು ಸೇರಿದಂತೆ ಒಟ್ಟು 09 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ ಎಂದು ಅವರು ತಿಳಿಸಿದರು.