ಜಿಲ್ಲೆಯ 58 ಗ್ರಾಮಗಳಲ್ಲಿ ಶೆ.100 ರಷ್ಟು ಮೊದಲ ಡೋಸ್ ಪೂರ್ಣ


ಧಾರವಾಡ, ನ.30: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಾಗೂ ಹೆಚ್ಚಿನ ಪ್ರಮಾಣದ ಲಸಿಕಾಕರಣಕ್ಕೆ ಆಶಾ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಿ ಕೇಲಸ ಮಾಡಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿನ 58 ಗ್ರಾಮಗಳಲ್ಲಿ ಶೇ.100 ರಷ್ಟು ಪಸ್ಟ್ ಡೋಸ್ ಲಸಿಕಾಕರಣವಾಗಿದ್ದು, ಈ ಸಾಧನೆಗೆ ಶ್ರಮಿಸಿದ ಆಶಾ ಕಾರ್ಯಕರ್ತೆಯರನ್ನು ಜಿಲ್ಲಾಡಳಿತದ ಕಚೇರಿಗೆ ಕರೆಸಿಕೊಂಡು ಗೌರವಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಕೇಂದ್ರ ಘಟಕವು ಜಿಲ್ಲಾ ಘಟಕದಿಂದ ರೆಡ್ ಕ್ರಾಸ್ ಜೀವನಾಸರೆ ಯೋಜನೆಯಡಿ ನೀಡಿರುವ ದಿನಸಿ ಕಿಟ್ ಗಳನ್ನು ಶೇ.100 ರಷ್ಟು ಲಸಿಕಾಕರಣದ ಸಾಧನೆ ಆಗಿರುವ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ವಿತರಿಸಿ, ಅಭಿನಂದಿಸುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ ಹಾಗೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಗಲಿರಳು ಶ್ರಮಿಸಿದ್ದಾರೆ. ಅವರೊಂದಿಗೆ ಪ್ರತಿನಿತ್ಯ ಶ್ರಮಿಸಿದ ಆಶಾ ಕಾರಗಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 20 ಲಕ್ಷ ಜನರಿಗೆ ಪಸ್ಟ್ ಡೋಸ್ ಹಾಕಲಾಗಿದ್ದು, ನಿಗದಿತ ಗುರಿಯಂತೆ ಶೆ.90 ರಷ್ಡು ಸಾಧನೆ ಆಗಿದೆ. ಮತ್ತು ಶೇ.52 ರಷ್ಟು ಎರಡನೇಯ ಡೋಸ್ ಪೂರ್ಣಗೊಂಡಿದೆ. ಬಾಕಿ ಇರುವ ಲಸಿಕಾಕರಣದ ಗುರಿ ಸಾಧಿಸಲು ವಿವಿಧ ಜನಪ್ರತಿನಿಧಿಗಳ, ಧಾರ್ಮಿಕ ಮುಖಂಡರ ಹಾಗೂ ಅಧಿಕಾರಿಗಳೊಂದಿಗೆ ಈಗ ಮನೆಮನೆಗೆ ತೆರಳಿ ಲಸಿಕೆ ಪಡೆಯದೆ ಇರುವವರಿಗೆ ಜಾಗೃತಿ ಮೂಡಿಸಿ,ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆಯಿಂದ ಆಶಾಗಳ ಬೇಡಿಕೆ ಮತ್ತು ಸಮಸ್ಯೆಗಳಿಗೆ ಜಿಲ್ಲಾಮಟ್ಟದಲ್ಲಿ ಸೀಗಬಹುದಾದ ಎಲ್ಲಾ ರೀತಿಯ ಸಹಾಯ, ನೆರವು ನೀಡಿ, ಸ್ಪಂದಿಸುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ 58 ಗ್ರಾಮಗಳಲ್ಲಿ ಶೇ.100 ರಷ್ಟು ಪಸ್ಟ್ ಡೋಸ್ ಲಸಿಕಾಕರಣದ ಸಾಧನೆ ಮಾಡಿರುವ ಆಶಾಗಳಿಗೆ ಈ ಗೌರವ ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಶೇ.100 ಲಸಿಕಾಕರಣ ಸಾಧನೆ ಮಾಡುವ ಆಶಾಗಳಿಗೆ ಪ್ರತಿ ಸೋಮವಾರ ಜಿಲ್ಲಾಡಳಿತದಿಂದ ಪುಡ್ ಕಿಟ್ ವಿತರಿಸಿ, ಅಭಿನಂದಿಸಲಾಗುವುದು. ಸಾಧನೆ ಮಾಡುವ ಸುಮಾರು 500 ಆಶಾಗಳನ್ನು ಗೌರವಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಕೋವಿಡ್ ಜಾಗೃತಿ, ಆರೋಗ್ಯ ಸೇವೆಗೆ ರೆಡ್ ಕ್ರಾಸ್ ಸಂಸ್ಥೆಯ ಕೊಡುಗೆ ಅಪಾರ; ಜಿಲ್ಲೆಯಲ್ಲಿ ಕೋವಿಡ್ ಜಾಗೃತಿ, ನಿಯಯಂತ್ರಣ ಮತ್ತು ವಿವಿಧ ಆರೋಗ್ಯ ಸೇವೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕ ಉತ್ತಮ ಸಹಕಾರ, ನೆರವು ನೀಡಿದೆ. ಸ್ವ್ಯಾಬ್ ಸಂಗ್ರಹಕ್ಕೆ ಲ್ಯಾಬ್ ಇರುವ ಸಂಚಾರಿ ವಾಹನ ನೀಡಿದೆ. ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ವಿವಿಧ ಸುರಕ್ಷಾ ಸಾಮಗ್ರಿಗಳನ್ನು ಪೂರೈಸಿದೆ. ಕೋವಿಡ್ ನಿಂದ ನೊಂದಿತ ಕುಟುಂಬಗಳಿಗೆ ಆಹಾರ ಕಿಟ್ ನೀಡಿದೆ ಮತ್ತು ಕೋವಿಡ್ ದಿಂದಾಗಿ ಸಾವಿಗೆ ಒಳಗಾದ ಬಡ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ಮೂಡಿಸಲು ಸುಮಾರು 30 ಹೊಲಿಗೆ ಯಂತ್ರಗಳನ್ನು ನೀಡಲು ರೆಡ್ ಕ್ರಾಸ್ ಸಂಸ್ಥೆ ನಿರಗಧರಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಕಾರ್ಯದರ್ಶಿ ಡಾ.ಅಯ್ಯನಗೌಡ ಪಾಟೀಲ, ಸದಸ್ಯರಾದ ಡಾ.ಉಮೇಶ ಹಳ್ಳಿಕೇರಿ, ದೀರಜ ವೀರನಗೌಡರ,ಮಹಾವೀರ ಉಪಾಧ್ಯಾಯ, ಮಾತರ್ಂಡಪ್ಪ ಕತ್ತಿ ಮತ್ತು ಮಹಾಂತೇಶ ವೀರಾಪುರ ಉಪಸ್ಥಿತರಿದ್ದರು.