ಜಿಲ್ಲೆಯ 5 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ಚಿತ್ರದುರ್ಗ.ಮಾ.೪;6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ  ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ದುಬಾರಿ ವೆಚ್ಚದ ಶಸ್ತ್ರ ಚಿಕಿತ್ಸೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ 5 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 15 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ. 1281  ವಿವಿಧ ಹಂತದಲ್ಲಿ ಶ್ರವಣ ದೋಷ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ   ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.ಇಲ್ಲಿನ ನೆಹರು ನಗರದ ಜ್ಞಾನವಿಕಾಸ ಪ್ರೌಢಾಶಾಲೆಯ ಆವರಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಶ್ರವಣ ದಿನದ ಸಲುವಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.20 ಡಿಎಲ್‍ಗಳಿಗಿಂತ ಕಡಿಮೆ ಶಬ್ದ ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು ಇದನ್ನು ತಡೆಯುವ ಮಾರ್ಗಗಳೂ ಇವೆ ಎಂದರು.ವಿಶ್ವ ಶ್ರವಣ ದಿನವನ್ನು ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ‘ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ ಬನ್ನಿ ವಾಸ್ತವವಾಗಿಸೋಣ’ ಈ ವರ್ಷದ ಧ್ಯೇಯ ವಾಕ್ಯವಾಗಿದೆ ಎಂದು ತಿಳಿಸಿದರು.