ಜಿಲ್ಲೆಯ 34294 ರೈತರಿಗೆಬರಪರಿಹಾರ ನೀಡಿದೆ: ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.26: ಈ ವರ್ಷ ಜಿಲ್ಲೆಯ 70 ಸಾವಿರ ಹೆಕ್ಟೇರ್  ಪ್ರದೇಶದಲ್ಲಿ ಮಳೆ ಅಭಾವದಿಂದ ಬರಕಾಡಿದೆ. ಬೆಲಕೆ ನಷ್ಟಹೊಂದಿದೆ. ಇದಕ್ಜಾಗಿ ಫ್ರೂಟ್  ತಂತ್ರಾಂಶದಲ್ಲಿ 85 ನೋಂದಣಿ ಮಾಡಿಕೊಂಡದ್ದ ಜಿಲ್ಲೆಯ ಶೇ  85 ರಷ್ಟು ರೈತರ ಪೈಕಿ ಮೊದಲ ಹಂತವಾಗಿ 34294 ರೈತರಿಗೆ
ಪ್ರತಿ ಹೆಕ್ಟಾರ್ ಗೆ ಎರೆಡು ಸಾವಿರದಂತೆ 6 ಕೋಟಿ, 74 ಸಾವಿರದ 434 ರೂಗಳ ಪರಿಹಾರ ನೀಡಿದೆ. ಎರಡನೇ ಕಂತಿನಲ್ಲಿ ನೀಡುತ್ತಿದ್ದು ಒಟ್ಟಾರೆ ಜಿಲ್ಲೆಯ 50 ಸಾವಿರಕ್ಕೂ ಹೆಚರಚು ರೈತರಿಗೆ ಬರ ಪರಹಾರವನ್ನು ರಾಜ್ಯ ಸರ್ಕಾರ ನೀಡಲಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಗಣರಾಜ್ಯೋತ್ಸವದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ರಾಜ್ಯ ಸರ್ಕಾರ ಬರ ಪರಿಹಾರ ನೀಡಿದೆ. ಆದರೆ ಈವರಗೆ ಕೇಂದ್ರ ನೀಡಿಲ್ಲ. ಮಲತಾಯಿ ಧೋರಣೆ ಮಾಡುತ್ತಿದೆ.
ಈ ಬಗ್ಗೆ ಸಂಸದರು ಮೌನವಹಿಸಿದ್ದಾರೆಂದು ಆಪಾದಿಸಿದರು.
@12bc = ನೀರಿನ‌ ಸಮಸ್ಯೆ ಬಾರದು:
ಶಿಕ್ಷಣ, ಆರೊಗ್ಯಕ್ಕೆ ಆಧ್ಯತೆ. ನಂತರ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡುತ್ತಿದ್ದು ಜಿಲ್ಲೆಯಲ್ಲಿ ಕೆಎಂಈಆರ್ ಸಿ ಅನುದಾನ ನಮಗೆ ಅನುಕೂಲಕರವಾಗಿದೆಂದ  ಅವರು ಈ  ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಆಗದಂತೆ ನೋಡಿಕೊಳ್ಳಲು.
ತುಂಗಭದ್ರ ಜಲಾಶಯದಿಂದ ನೂರು ಕ್ಯೂಸೆಕ್ ನೀರನ್ನು  ಎಲ್ ಎಲ್ ಸಿ ಕಾಲುವೆ  ಮೂಲಕ ಪಡೆದು  ನೀರಿನ ಸಮಸ್ಯೆ ಇಲ್ಲದೆ ನೋಡಿಕೊಳ್ಳಲಿದೆಂದರು.
@12bc = ಜೀನ್ ಪಾರ್ಕ್ :
ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕಳೆದ ವಿಧಾನ ಸಭಾ  ಚುನಾವಣೆ ಸಂದರ್ಭದಲ್ಲಿ  ಹೇಳಿದಂತೆ ನಗರದಲ್ಲಿ ಜೀನ್ಸ್ ಪಾರ್ಕ್  ಮತ್ತು ವಿಮಾನ ನಿಲ್ದಾಣಕ್ಕೆ ಈ ಬಾರಿ ಬಜೆಟ್ ನಲ್ಲಿ ಅನುದಾನ ದೊರೆಯಲಿದೆಂದರು.
@12bc = ಸುಸಜ್ಜಿತ ಜಿಮ್:
ನಗರದ  ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ   12 ಕೋಟಿ ರೂ ವೆಚ್ಚದಿಂದ 100/100 ವಿಸ್ತ್ರೀರ್ಣದ  ನಾಲ್ಕು ಪ್ಲೋರ್ ನಲ್ಲಿ ಸುಸಜ್ಜಿತ ಜಿಮ್ ನಿರ್ಮಾಣ ಮಾಡಲಿದೆಂದು ತಿಳಿಸಿದರು.‌
ಬೆಂಗಳೂರಿನಲ್ಲಿ ವಿವಿಧ ಕಂಪನಿಗಳ ಮೂಲಕ  ಫೆ 19.20 ಕ್ಕೆ ಜಾಬ್ ಮೇಳ ಹಮ್ಮಿಕೊಂಡಿದೆ. ಇದರಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಆಯ್ದ ಯುವಕರಿಗೆ ತರಬೇತಿ ನೀಡಲಿದೆಂದರು.
ವಾಲ್ಮೀಕಿ ನಿಗಮಕ್ಕೆ ಬಸನಗೌಡ ದದ್ದಲ್ ನೇಮಕ ಮಾಡಲಿದೆ ಇದಕ್ಕೆ ಅಸಮಾಧಾನ ಇಲ್ಲ ಸ್ವಾಗತ ಎಂದರು.
ನನ್ನನ್ನು ಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗುವಂತೆ ಕ್ಷ ಕೇಳಿಲ್ಲ. ಕೇಳುದರೆ ನೋಡುವೆ ಎಂಸ ಅವರು ಬಳ್ಳಾರಿ ಉತ್ಸವ ಆಚರಿಸಲಿದ್ದು ಅದು ಯುವಜನೋತ್ಸವವಾಗಿಯೂ ಇರಲಿದೆಂದರು.
ಶಾಸಕ ಭರತ್ ರೆಡ್ಡಿ, ಡಿಸಿ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.
ಮಹಿಳಾ ಡಿಗ್ರಿ ಕಾಲೇಜು 25 ಕೋಟಿ  ಡಿಎಂಎಫ್ ದಿಂದ 25 ಕೋಟಿ ರೂ. ವಾಲ್ಮೀಕಿ ಭವನದ ಮುಂದೆ ಬರಲಿದೆ.