ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ಮೇ.20ರಿಂದ 22ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆವ್ಯವಸ್ಥಿತ ಹಾಗೂ ಸುಗಮ ಪರೀಕ್ಷೆU Éಜಿಲ್ಲಾಧಿಕಾರಿಡಾ.ವಿಜಯಮಹಾಂತೇಶದಾನಮ್ಮನವರ ಸೂಚನೆ

ವಿಜಯಪುರ:ಮೇ.18: ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿಇದೇ ಮೇ 20 ರಿಂದ ಮೇ.22 ರವರೆಗೆಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಸುಸೂತ್ರವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶದಾನಮ್ಮನವರಅವರು ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದಅವರು, ಮೇ.20ರ ಶನಿವಾರದಂದುಜೀವಶಾಸ್ತ್ರ, ಗಣಿತ, ಮೇ. 21 ರಂದು ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಮತ್ತು ಮೇ.22 ರಂದುಕನ್ನಡ ವಿಷಯಕುರಿತು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ನೋಂದಣಿಯಾದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಪರೀಕ್ಷಾ ಕೊಠಡಿಗಳಿಗೆ ಪ್ರವೇಶಇರುವುದಿಲ್ಲ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಪರೀಕ್ಷೆ ಸಂದರ್ಭದಲ್ಲಿಯಾವುದೇ ಲೋಪ ಆಗಬಾರದು. ನಿಯಮದಂತೆ ಮಾರ್ಗಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷಾಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಅದರಂತೆ,ಪರೀಕ್ಷಾಕೇಂದ್ರದ ಉಪ ಮುಖ್ಯಅಧೀಕ್ಷಕರು, ಕಸ್ಟೋಡಿಯನ್‍ಗಳು, ವೀಕ್ಷಕರು, ಜಾಗ್ರತ ದಳದ ಸದಸ್ಯರುಅವಶ್ಯಕ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದಅವರು, ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ,ಯಾವುದೇ ರೀತಿಯ ಲೋಪವಾಗದಂತೆ ಪರೀಕ್ಷೆ ನಡೆಸುವಂತೆ ಸೂಚಿಸಿದರು.
ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, 10,510 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ವಿಜಯಪುರ ನಗರದಲ್ಲಿ 19, ಬಬಲೇಶ್ವರ-01, ತಿಕೋಟ-02,ಬಸವನ ಬಾಗೇವಾಡಿಯಲ್ಲಿ-02 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿಕೊಠಡಿಯಲ್ಲಿದೈಹಿಕಅಂತರÀ ಕನಿಷ್ಠ ಮೂರು ಅಡಿ ಅಂತರವಿರಬೇಕು. ಗರಿಷ್ಠ 24 ವಿದ್ಯಾರ್ಥಿಗಳು ಇರಬೇಕು. ಒಂದು ಬೆಂಚ್‍ನಲ್ಲಿಇಬ್ಬರು ವಿದ್ಯಾರ್ಥಿಗಳು ಮಾತ್ರಇದ್ದು, ಒಟ್ಟು 12 ಬೆಂಚ್‍ಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ನಿರ್ವಹಣೆಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಪರೀಕ್ಷಾರ್ಥಿಗಳು ಯಾವುದೇರೀತಿಯ ಕೈ ಗಡಿಯಾರ, ಸೈಂಟಿಫಿಕ್‍ಕ್ಯಾಲಕುಲೇಟರ್, ಪೇಜರ್, ಮೊಬೈಲ್ ಹಾಗೂ ಇನ್ನಿತರೆಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸದಂತೆ ಕ್ರಮಕೈಗೊಳ್ಳಬೇಕು. ಅಲ್ಲದೇಉಪ ಮುಖ್ಯಅಧೀಕ್ಷಕರನ್ನು ಹೊರತುಪಡಿಸಿ ಇನ್ನುಳಿದ ಪರೀಕ್ಷಾ ಸಿಬ್ಬಂದಿಗಳು ಸಹ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಾಲೇಜಿನ ಪ್ರಾಚಾರ್ಯರುಉಪಮುಖ್ಯಅಧೀಕ್ಷಕರಾಗಿರುತ್ತಾರೆ. ವೀಕ್ಷಕರನ್ನಾಗಿ 24 ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನಾಗಿ ನೇಮಿಸಿದ ಅಧಿಕಾರಿಗಳು ತಮಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಹಾಜರಾಗಿ ಪರೀಕ್ಷಾಕಾರ್ಯ ಮುಗಿಯುವವರೆಗೂಕೇಂದ್ರದಲ್ಲಿದ್ದು, ಪರೀಕ್ಷೆ ಬಗ್ಗೆ ಸಂಕ್ಷಿಪ್ತವಾಗಿ ವರದಿ ನೀಡಬೇಕು.ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಉಪನ್ಯಾಸಕರುಗಳನ್ನು ವಿಶೇಷಜಾಗೃತ ದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆಎಂದುಅವರು ತಿಳಿಸಿದರು.
ಪರೀಕ್ಷಾ ವೇಳಾಪಟ್ಟಿ : ಮೇ. 20 ರಂದು ಶನಿವಾರ ಬೆಳಿಗ್ಗೆ 10-30 ರಿಂದ 11-50 ರವರೆಗೆಜೀವಶಾಸ್ತ್ರಅಂದು ಮಧ್ಯಾಹ್ನ 2-30 ರಿಂದ 3-50 ರ ವರೆಗೆಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ಮೇ. 22 ರಂದುರವಿವಾರ ಬೆಳಿಗ್ಗೆ 10-30 ರಿಂದ 11-50 ರವರೆಗೆ ಭೌತಶಾಸ್ತ್ರ, ಅಂದು ಮಧ್ಯಾಹ್ನ 2-30 ರಿಂದ 3-50ರ ವರೆಗೆರಸಾಯನಶಾಸ್ತ್ರ ಹಾಗೂ ಮೇ.22 ರಂದು ಸೋಮವಾರ ಬೆಳಿಗ್ಗೆ 11-30 ರಿಂದ 12-30 ರವರೆಗೆಕನ್ನಡ ವಿಷಯದಕುರಿತು ಪರೀಕ್ಷೆ ನಡೆಯಲಿವೆ.
ಸಭೆಯಲ್ಲಿಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ, ಖಜಾನೆ ಇಲಾಖೆ ಉಪನಿರ್ದೇಶಕರಾಜಗೋಪಾಲ, ಡಿಡಿಪಿಯು ಡಾ.ಸಿ.ಕೆ.ಹೊಸಮನಿ, ಪ್ರಶ್ನೆ ಪತ್ರಿಕೆ ವಿತರಣಾತಂಡದ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಹಾಗೂ ಎಲ್ಲಾ ಪರೀಕ್ಷಾಕೇಂದ್ರದ ಉಪ ಅಧೀಕ್ಷಕರು ಹಾಗೂ ವಿವಿಧಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.