ಜಿಲ್ಲೆಯ ೬ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಡಾ.ಶಿವರಾಜ್,ಶಿವನಗೌಡ,ವಜ್ಜಲ,ಕರಿಯಪ್ಪ ಪ್ರತಾಪಗೌಡ, ತಿಪ್ಪರಾಜ್ ರಿಗೆ ಬಿಜೆಪಿ ಟಿಕೇಟ್ ಫೈನಲ್
ರಾಯಚೂರು ಏ ೧೧:- ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಿತಿಯು ೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಾನ್ವಿ ಕ್ಷೇತ್ರಕ್ಕೆ ಮಾತ್ರ ಇನ್ನೂ ಯಾವುದೇ ಅಭ್ಯರ್ಥಿ ಘೋಷಿಸಿಲ್ಲ. ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಿಗೆ ಇಬ್ಬರು ಹಾಲಿ ಶಾಸಕರು ಸೇರಿದಂತೆ ಮೂವರು ಮಾಜಿ ಶಾಸಕರಿಗೆ ಟಿಕೆಟ್ ಘೋಷಿಸಿದ ಪಕ್ಷ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕೆ.ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಹೊಸ ಮುಖ ಪರಿಚಯಿಸಿದ್ದಾರೆ.
ತೀವ್ರ ಕುತೂಹಲಗಳ ಮಧ್ಯೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಡಾ. ಶಿವರಾಜ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಅವರ ನಂಬಿಕೆ ನಿಜ ಗೊಳಿಸಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಕೆ .ಶಿವನಗೌಡ ನಾಯಕ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಕೆ .ಕರಿಯಪ್ಪ ಲಿಂಗಸೂಗೂರು ಕ್ಷೇತ್ರಕ್ಕೆ ವಿಧಾನಸಭಾ ಕ್ಷೇತ್ರಕ್ಕೆ ಮಾನಪ್ಪ ವಜ್ಜಲ್, ಗ್ರಾಮಾಂತರ ಕ್ಷೇತ್ರಕ್ಕೆ ತಿಪ್ಪರಾಜ್ ಹವಾಲ್ದಾರ್ ಅವರಿಗೆ ಟಿಕೇಟ್ ಅಂತಿಮಗೊಳಿಸಲಾಗಿದೆ.

ಬಾಕ್ಸ್
ಜಿಲ್ಲೆಯ ಮಾನ್ವಿ ವಿಧಾನಸಭಾ ಒಂದು ಕ್ಷೇತ್ರದಲ್ಲಿ ಕಾದುನೋಡುವ ತಂತ್ರವನ್ನು ಬಿಜೆಪಿ ಪಕ್ಷ ಅನುಸರಿಸುತ್ತಿದೆ, ನಿನ್ನೆ ೧೮೯ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾನ್ವಿ ಕ್ಷೇತ್ರ ಬಿಟ್ಟು ಉಳಿದ ೬ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ,ಮಾನ್ವಿ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್ ಸ್ಪರ್ಧೆ ಮಾಡ್ತಿದ್ದಾರೆ, ಕಾಂಗ್ರೆಸ್ ಟಿಕೆಟ್ ಗಾಗಿ ಬಾರಿ ಪೈಪೋಟಿ ಏರ್ಪಟಿದೆ, ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡುತ್ತಾರೆ ಎನ್ನುವುದನ್ನ ನೋಡಿಕೊಂಡು ಬಿಜೆಪಿ ಟಿಕೆಟ್ ತೀರ್ಮಾನ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಅತೃಪ್ತರು ಬಿಜೆಪಿ ಪಕ್ಷಕ್ಕೆ ಜಂಪ್ ಆಗುವ ಸಂಭವ ದಟ್ಟವಾಗಿರುವ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.