ಜಿಲ್ಲೆಯ ಸ್ಕೌಟ್ ಗೈಡ್ ಚಟುವಟಿಕೆಗಳು ಇತರರಿಗೆ ಅನುಕರಣೀಯವಾಗಿವೆ: ಸುಜಾತಾ ಮುಲ್ಲಾ

ಬೀದರ:ನ.16: ಶಾಲಾ ಶಿಕ್ಷಣದ ಜೊತೆ ಮಾನವೀಯ ಮೌಲ್ಯ ಬಿತ್ತುತ್ತಿರುವ ಹಾಗೂ ದೇಶ ಸೇವೆ ಮಾಡುವ ಅವಕಾಶ ಬಂದಾಗ ತನ್ನ ಜಾತಿ, ಪಕ್ಷ, ಭಾಷೆ, ಪ್ರದೇಶಗಳಿಗಿಂತ ದೇಶವೇ ಮೊದಲು ಎನ್ನುವದನ್ನು ಮೂಲಧ್ಯೇಯವನ್ನಾಗಿಟ್ಟುಕೊಂಡು ಕೋವಿಡ್ ರಜಾ ದಿನಗಳಲ್ಲೂ ಸಹ ಯಾವುದೇ ಸಂಭಾವನೆ ಇಲ್ಲದೆ ಮಕ್ಕಳಲ್ಲಿ ಅಪ್ಪಟ ದೇಶ ಪ್ರೇಮದ ಜೊತೆ ಜೀವನ ಕೌಶಲ್ಯಗಳನ್ನು ಕಲಿಸುತ್ತಿರುವ ಸ್ಕೌಟ್ ಗೈಡ್ ಶಿಕ್ಷಕರ ಸೇವೆ ಅಪಾರವಾದುದು. ಎಂದು ರಾಜ್ಯ ಸಂಸ್ಥೆಯ ಪ್ರಗತಿ ಪರಿಶೀಲನಾ ತಂಡದ ಮುಖ್ಯಸ್ಥೆ, ಸುಜಾತಾಮುಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರಮ್ಮ ಸಿದಾರಡ್ಡಿಯವರ ನೇತೃತ್ವ ಮತ್ತು ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾರವರ ಮಾರ್ಗದರ್ಶನದಲ್ಲಿ, ಜಿಲ್ಲೆಯಲ್ಲಿ ಒಳ್ಳೆಯ ಸಂಘಟನೆ P ಜೊತೆ ಕಛೇರಿ ದಾಖಲೆಗಳು ಅಚ್ಚುಕಟ್ಟುತನದಿಂದ ಕೂಡಿವೆ ಇವು ಇತರರಿಗೆ ಮಾದರಿಯಾಗಿವೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಮಾರ್ಗದರ್ಶನದಂತೆ ಜಿಲ್ಲೆಯ ಸ್ಕೌಟ್ ಗೈಡ್ ಮಕ್ಕಳು ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮಾಡಿರುವದು ಮತ್ತು ಲಸಿಕಾಕರಣದಲ್ಲಿ ಮಾಡಿರು ಶ್ರಮ ನೋಡಿದರೆ ಹೆಮ್ಮೆ ಎನಿಸುತ್ತದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಬುರ್ಗಿ ಸ್ಕೌಟ್ ಆಯುಕ್ತ ಎಸ್.ಪಿ ಸುಳ್ಳದ ಯುವಕ ಯುವತಿಯರಿಗಾಗಿ ನಡೆದ ಚಟುವಟಿಕೆ ಪರಿಶೀಲಿಸಿ, ಗೈಡ್ ವಿದ್ಯಾರ್ಥಿ ಪ್ರಾಪ್ತಿ ಅರಳಿ ರಾಷ್ಟ್ರಮಟ್ಟದ ಸ್ಪರ್ದೆಯಲ್ಲಿ ಜಿಲ್ಲೆಗೆ ಎರಡನೆ ಸ್ಥಾನ ತಂದಿರುವದು ಮತ್ತು 2020ನೇ ಸಾಲಿನ ನೀಟ್ ಪರಿಕ್ಷೆಯಲ್ಲಿ ಸ್ಕೌಟ್ ವಿದ್ಯಾರ್ಥಿ 9ನೇ ಸ್ಥಾನ ಪಡೆದಿರುವದು ನೋಡಿದರೆ. ಜಿಲ್ಲೆಯಲ್ಲಿ ಸ್ಕೌಟ್ ಯುವಕರಿಗೆ ವಿಪುಲ ಅವಕಾಶ ಮಾಡಿಕೊಟ್ಟಿದೆ ಎಂದರು. ಅಂಬರೇಶ ಕೋರಿ ಆಡಳಿತಕ್ಕೆ ಸಂಬಂದಿಸಿದ ಮತ್ತು ಸುಮಂಗಲಾ ಕೋರಿ ಗೈಡ್ ವಿಭಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಪರಿಶೀಲಿಸಿದರು.

ಡಾ. ಭರಸೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕೇದ್ರಕಛೇರಿ ಸ್ಥಾನೀಕ ಆಯುಕ್ತ ಕಾಶಿನಾಥ ಪಾಟೀಲ್, ಸ್ಕೌಟ್ ಗೈಡ್ ಬೆಳವಣಿಗೆಯಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಕುರಿತು ತಿಳಿಸಿದರು. ಕೆ.ಎಸ್.ಚಳಕಾಪುರೆ, ಬೀದರನಲ್ಲಿ ಸ್ಕೌಟ್ ನಡೆದು ಬಂದ ದಾರಿ ಕುರಿತು ಮಾತನಾಡುತ್ತಾ, ಸಂಸ್ಥೆ ಕಟ್ಟುವಲ್ಲಿ ದುಡಿದ ಮಹನಿಯರನ್ನು ಮತ್ತು ದಾನಿಗಳನ್ನು ನೆನೆಸಿಕೊಂಡರು. ರಾಚಯ್ಯಾ ನಾಸಿ ಬದಲಾದ ಪರಿಸ್ಥಿತಿಗೆ ತಕ್ಕಂತೆ ಸಂಸ್ಥೆಗೆ ತಾಂತ್ರಿಕತೆಯ ಸ್ಪರ್ಷ ಅವಶ್ಯಕತೆ ಇದ್ದು, ರಾಜ್ಯಸಂಸ್ಥೆಯಿಂದ ಹೆಚ್ಚಿನ ಅನುದಾನ ಕೊಡಿಸುವಂತೆ ಮನವಿ ಮಾಡಿದರು. ಔರಾದ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಟಂಕಸಾಲೆ ಅಚ್ಚುಕಟ್ಟಾಗಿ ಸಭೆಯ ನಿರ್ವಹಣೆ ಮಾಡಿದರು. ಔರಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾದ್ಯಕ್ಷೆ ಸುಜಾತಾ ಟಂಕಸಾಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಗರದ ನಾವದಗೆರಿ ಸರಕಾರಿ ಶಾಲೆಯಲ್ಲಿ ಬೀದರ ತಾಲೂಕು ಸ್ಥಳೀಯ ಸಂಸ್ಥೆ ಕಛೇರಿ ಉದ್ಘಾಟಿಸಲಾಯಿತು. ಮಕ್ಕಳ ದಿನಾಚರಣೆ ನಿಮಿತ್ಯ ಜಿಲ್ಲಾ ನ್ಯಾಯಾಲಯದಲ್ಲಿ ಭಾಗವಹಿಸಿದ ಸ್ಕೌಟ್ ಗೈಡ್ ಮಕ್ಕಳು, ಕಾರ್ಯದರ್ಶಿ ಚಂದ್ರಕಾಂತ ಬೆಳಕೋಣಿ, ಸ್ಕೌಟ್ ಶಿಕ್ಷಕ ಐ.ಎಸ್. ಕಲ್ಮಣಿ, ಗೈಡ್ ಕ್ಯಾಪ್ಟನ್ ವಿದ್ಯಾಶ್ರೀ ಸೇಕಾಪುರ, ರೋವರ್ ಸಲೋಮನ್ ತಂಡದ ಸದಸ್ಯರು ಹಾಜರಿದ್ದರು.