ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ನಮ್ಮ ಧ್ಯೇಯ

ಸಂಜೆವಾಣಿ ವಾರ್ತೆ
ಸಿರುಗುಪ್ಪ, ಡಿ.06: ತಾಲೂಕಿನ ರಾರಾವಿ ಗ್ರಾಮದ ಐತಿಹಾಸಿಕ ಶ್ರೀ ಉತ್ತಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ  ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ವೈ.ಎಮ್.ಸತೀಶ್ ಉದ್ಘಾಟಿಸಿದರು.
ನಂತರ ಮಾತನಾಡಿ ಎಂ.ಪಿ ಮತ್ತು ಎಮ್.ಎಲ್.ಎ ರೊಂದಿಗೆ ವಿಧಾನ ಪರಿಷತ್ ಸದಸ್ಯರು ಸೇರಿ ಕಾರ್ಯನಿರ್ವಹಿಸುವುದರಿಂದ  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆಯಾಗುತ್ತದೆ,  10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಮೂಲಕ ನಿಮ್ಮ ಸೇವೆ ಮಾಡಲು ಮತದಾರೇ ನಿಮ್ಮ ಅಮೂಲ್ಯ ಮತ ನೀಡಬೇಕೆಂದು ಕೋರಿದರು.
 ಶಾಸಕ ಎಂ.ಎಸ್.ಸೋಮಲಿಂಗಪ್ಪ, ಜಿಲ್ಲಾ ಮಾಜಿ ಉಪಮೇಯರ ಶಶಿಕಲಾ, ಬಿಜೆಪಿ ತಾಲೂಕು ಅಧ್ಯಕ್ಷ ಪಂಪನಗೌಡ, ಎ.ಪಿಎಂ.ಸಿ.ಮಾಜಿ ಅಧ್ಯಕ್ಷ ನಾಗೇಶ, ಮಾಜಿ ಜಿ.ಪಂ‌.ಸದಸ್ಯ ದಮ್ಮೂರು ಸೋಮಪ್ಪ, ನೌಕರ ಸಂಘದ ಮಾಜಿ ಅಧ್ಯಕ್ಷ ಮೇಸ್ತ್ರಿ ರಾಮನಗೌಡ, ಎಸ್.ಟಿ.ಮೊರ್ಚ ಅಧ್ಯಕ್ಷ ರಾಮನಾಯಕ, ಪ್ರಧಾನ ಕಾರ್ಯದರ್ಶಿ ಲಸ್ಕರ್ ಶೇಕಪ್ಪ, ಕಾರ್ಯದರ್ಶಿ ಬಂಡ್ರಾಳ ಮಲ್ಲಿಕಾರ್ಜುನ ಇದ್ದರು.