ಜಿಲ್ಲೆಯ ಸರ್ಕಾರಿ ನೌಕರರ ಸಮಸ್ಯಗಳನ್ನು ಇತ್ಯರ್ಥಪಡಿಸಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

ವಿಜಯಪುರ, ಎ.9-ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರ ಸಮಸ್ಯಗಳನ್ನು ಇಥ್ಯರ್ಥಪಡಿಸಿ ಮುಂದಿನ ಸಭೆಯಲ್ಲಿ ಅನುಸರಣಾವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಪಿ.ಸುನೀಲ ಕುಮಾರ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಕುಂದುಕೊರತೆಗಳ ಜಂಟಿ ಸಮಾಲೋಚನೆ ಸಭೆಯ ಅಧ್ಯ್ಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಗಳಲ್ಲಿಯ ಸಮಸ್ಯೆಗಳ ಕುರಿತು ಚರ್ಚಿಸಿ ಮುಂದಿನ ಸಭೆಯೊಳಗೆ ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಕ್ತ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಸರಕಾರಿ ನೌಕರರಿಗೆ ಕಚೇರಿ ವೇಳೆಯನ್ನು ಹಾಗೂ ಶಾಲಾ ಅವಧಿಯನ್ನು ಬೆಳಿಗ್ಗೆ 8 ರಿಂದ 1.30ರ ವರೆಗೆ ನಿಗದಿತ ಪಡಿಸುವುದು, ಆರೋಗ್ಯ ಇಲಾಖೆಯ ವಾರಿಯರಸಗೆ ನೀಡುವ ಜೀವ ವಿಮೆಯನ್ನು ಎಲ್ಲಾ ಇಲಾಖೆಯ ಕೋವಿಡ ನಿಯಂತ್ರಣ ಕರ್ತವ್ಯದಲ್ಲಿರುವ ನೌಕರರಿಗೂ ಹಾಗೂ ಉಳಿದ ಇಲಾಖಾ ನೌಕರರಿಗೂ ಸಹ ಜೀವವಿಮಾ ವಿಸ್ತರಿಸಲು ಸರ್ಕಾರಕ್ಕೆ ಸಿಪಾರಸ್ಸು ಮಾಡುವದು, ಬಹುತೇಕ ಕಚೇರಿಗಳಲ್ಲಿ ಕರೊನಾ ಕೊವಿಡ್- 19 ತಡೆಗಟ್ಟುವ ವಸ್ತುಗಳ ಪೂರೈಸುವುದು, ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಕೊವಿಡ್- 19 ತಡೆಗಟ್ಟುವ ನಿಟ್ಟಿನಲ್ಲಿ ಕಚೇರಿಗಳಿಗೆ ಎಲ್ಲಾ ಅವಶ್ಯಕ ವಸ್ತುಗಳನ್ನು ಪೂರೈಸುವುದು, ಕರ್ತವ್ಯನಿರತ ಅಧಿಕಾರಿ ಮತ್ತು ನೌಕರರ ಮೇಲೆ ಬಾಹ್ಯ ವ್ಯಕ್ತಿಗಳಿಂದ ನಿಂದನೆ ಹಾಗೂ ಹಲ್ಲೆ ನಡೆದಾಗ ಕೂಡಲೇ ಸ್ಪಂದಿಸಿ ನೌಕರರಿಗೆ ಭದ್ರತೆ ಒದಗಿಸುವದರ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಕ್ರಿಡಾಕೂಟ ಹಾಗೂ ಸಾಂಸ್ಕøತಿಕ ಸ್ಫರ್ಧೆಗಳಿಗೆ ಈಗಾಗಲೆ ಸರಕಾರದ ಆದೇಶದಂತೆ ಜಿಲ್ಲಾ ಪಂಚಾಯತ ಕ್ರಿಯಾಯೋಜನೆಯಲ್ಲಿ ಪ್ರತಿ ವರ್ಷ 5ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲು ಕ್ರಮ ವಹಿಸುವುದು ಎಲ್ಲಾ ಇಲಾಖೆಗಳ ಕಾಲಮಿತಿ ವೇತನಮುಂಬಡ್ತಿ, ರಜೆ ಇತ್ಯಾದಿಗಳ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಮಂಜೂರು ಮಾಡುವದು, ನೂತನವಾಗಿ ರಚನೆಯಾದ ಹೊಸ ತಾಲುಕುಗಳಿಗೆ ಕಚೇರಿಗಳನ್ನು ಪ್ರಾರಂಭಿಸಿ ಸಂಬಂದಿಸಿದ ಕಚೇರಿ, ಸಿಬ್ಬಂದಿ ಹಾಗೂ ಮೂಲಭೂತ ಸೋಲಭ್ಯಗಳನ್ನು ಒದಗಿಸುವದು, ಜಿಲ್ಲೆಯಲ್ಲಿ ವಿವಿಧಕಾರಣಗಳಿಂದ ನೌಕರರ ಅಧಿಕಾರಿಗಳ ಮೇಲೆ ಭಾಕಿ ಇರುವ ಇಲಾಖಾ ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವದು. ನಗದು ರಹಿತ ಚಿಕಿತ್ಸೆಗಾಗಿ ಶಿಕ್ಷಕರ/ನೌಕರರ ಅವಲ್ನಭಿತರ ಮಾಹಿತಿಯನ್ನು ಎಚ್.ಅರ್.ಎಮ್.ಎಸ್ ನಲ್ಲಿ ಆಧಾರ ಸಂಖ್ಯೆ ಮತ್ತು ಕೆ.ಜಿ.ಐ.ಡಿ ಸಂಖೆಯೊಂದಿಗೆ ಅಪಡೆಟ್ ಮಾಡುವದು. ಜಿಲ್ಲೆಯ ಶಿಕ್ಷಕರ ವೇತನವನ್ನು ಸರಿಯಾದ ಸಮಯಕ್ಕೆ ಬಾಟವಡೆ ಮಾಡುವದು ಹಾಗೂ ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವದು ಸೇರಿದಂತೆ ಅನೇಕ ಇಲಾಖೆಗಳಲ್ಲಿಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕಾರರ ಸಂಘದ ವಿಜಯಪುರ ಘಟದಕ ಅಧ್ಯಕ್ಷರಾದ ಸರೇಶ ಶಡಶ್ಯಾಳ, ಪ್ರಧಾನಕಾರ್ಯದರ್ಶಿಗಳಾದ ರಾಜಶೇಖರ ದೈವಾಡಿ, ಖಜಾಂಚಿ ಜುಬೇರ್ ಕೆರೂರ್, ರಾಜ್ಯಪರಿಷತ ಸದಸ್ಯರಾದ ವಿಜಯಕುಮಾರ ಹತ್ತಿ, ಗೌರವಾಧ್ಯಕ್ಷರಾದ ವಿಶ್ವನಾಥ ಬೆಳ್ಳೆನವ, ಜಿಲ್ಲಾ ಮಟ್ಟದ ಪಧಾದಿಕಾರಿಗಳು, ತಾಲೂಕಾ ಅಧ್ಯಕ್ಷರುಗಳು, ಹಾಗು ಇತರ ಪಧಾದಿಕಾರಿಗಳು ಉಪಸ್ಥಿತರಿದ್ದರು.