ಜಿಲ್ಲೆಯ ವಿವಿಧಡೆ ಶ್ರಾದ್ಧ ಭಕ್ತಿಯ ನಾಗರ ಪಂಚಮಿ ಆಚರಣೆ

ರಾಯಚೂರು, ಆ.೨- ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬದಿಂದ ಸಾಲ ಸಾಲು ಹಬ್ಬಗಳು ಆರಂಭವಾಗುತ್ತವೆ. ನಾಗರಪಂಚಮಿ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಹಬ್ಬಗಳು ಆರಂಭವಾಗುತ್ತವೆ.ನಗರದ ನಾನಾ ಕಡೆಗಳಲ್ಲಿ ನಾಗರಪಂಚಮಿ ಹಬ್ಬದ ಅಂಗವಾಗಿ ನಾಗದೇವತೆ ವಿಗ್ರಹಕ್ಕೆ ಸುಮಂಗಲಿಯರು ಹಾಲನ್ನು ಎರೆದರು.
ನಗರದ ನಂದೇಶ್ವರ ದೇವಸ್ಥಾನ, ರಾಜಮಾತ, ರಾಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನದಲ್ಲಿ ನಾಗ ದೇವತೆಗೆ ಹಾಲೆರದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಗ್ರಾಮದ ಪ್ರತಿಮನೆಗಳಲ್ಲಿ ಹಲವಾರು ಬಗೆಯ ಲಾಡೂಗಳು(ಉಂಡಿ) ಎಳ್ಳು, ಶೇಂಗಾ, ಕಡಲೆ, ಹೆಸರು ಹಾಗೂ ರವೆಯ ಉಂಡೆಗಳನ್ನು ಮತ್ತು ಉಪ್ಪು ಗಾರಿಗೆ, ಸಿಹಿ ಗಾರಿಗೆ ತಯಾರು ಮಾಡಿ ನಾಗದೇವತೆಗೆ ಪೂಜೆ ಸಲ್ಲಿಸಿದರು.