ಜಿಲ್ಲೆಯ ವಿವಿದೆಢೆ ಫಲಾನುಭವಿಗಳಿಗೆ ಕೋವಿಡ್-19 ವ್ಯಾಕ್ಸಿನೇಶನ್

ವಿಜಯಪುರ ಜ.14: ಜಿಲ್ಲೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ವಿತರಣೆ ಸಂಬಂಧ ಈ ಕೆಳಗಿನಂತೆ ಎಲ್ಲಾ ರೀತಿಯ ಅಗತ್ಯ ತಯಾರಿ ಹಾಗೂ ಕ್ರಮಗಳನ್ನು ನಿರ್ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಸವನಬಾಗೇವಾಡಿಯಲ್ಲಿ 1370, ಬಿಜಾಪುರ ತಾಲೂಕಿನಲ್ಲಿ 10487, ಇಂಡಿ ತಾಲೂಕಿನಲ್ಲಿ 928, ಮುದ್ದೇಬಿಹಾಳ ತಾಲೂಕಿನಲ್ಲಿ 1553, ಸಿಂದಗಿ ತಾಲೂಕಿನಲ್ಲಿ 1482 ಹೀಗೆ ಒಟ್ಟು 15820 ಫಲಾನುಭವಿಗಳಿದ್ದಾರೆ.

ಅದರಂತೆ ಇದರಲ್ಲಿ ಕೋಲ್ಡ್ ಚೈನ್ ಸ್ಥಳಗಳು, ಕೇಂದ್ರಗಳು ಒಟ್ಟು 80 ಇರುತ್ತವೆ. ಈ ಮೇಲ್ಕಾಣಿಸಿದಂತೆ ತಯಾರಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ವಿಸ್ತೃತವಾದ ಮೊದಲ ಹಂತದಲ್ಲಿ ಈ ಕೆಳಗಿನಂತೆ 8 ಸ್ಥಳಗಳಲ್ಲಿ ದಿನಾಂಕ 16- 1- 2021 ರಂದು ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ ನಗರದ ಬಿಎಲ್‍ಡಿಇಎ ಬಿ.ಎಂ ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ 1000, ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 400, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 69, ಬ.ಬಾಗೇವಾಡಿಯಲ್ಲಿ 100, ಇಂಡಿಯಲ್ಲಿ 33, ಮುದ್ದೇಬಿಹಾಳದಲ್ಲಿ 100, ಸಿಂದಗಿಯಲ್ಲಿ 139, ಯುಪಿಎಚ್‍ಸಿ ದರ್ಗಾದಲ್ಲಿ 71 ಹೀಗೆ ಒಟ್ಟು 1912 ಪೆÇೀರ್ಟಲ್‍ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪ್ರಥಮ ಹಂತದಲ್ಲಿ ದಿನಾಂಕ 16-01-2021 ರಂದು ಕೋವಿನ್ ತಂತ್ರಾಂಶದಲ್ಲಿ ನೊಂದಣಿಯಾದ ಒಟ್ಟು 1912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಕ್ಸಿನೇಶನ್ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ 5 ಅಧಿಕಾರಿಗಳನ್ನು ಒಳಗೊಂಡ 20 ತಂಡಕ್ಕೆ ಸೂಕ್ತ ತರಬೇತಿಯನ್ನು ನೀಡಲಾಗಿದ್ದು, ಪ್ರತಿಯೊಂದು ಲಸಿಕಾ ಕೇಂದ್ರಗಳಲ್ಲಿ ಇದಕ್ಕಾಗಿ 3 ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ.

ಈ ಮೇಲ್ಕಾಣಿಸಿದ ದಿನದಂದು ಲಸಿಕೆಯನ್ನು ಪಡೆಯುವ ಫಲಾನುಭವಿಗಳಿಗೆ ಎಸ್‍ಎಮ್‍ಎಸ್ ಮೂಲಕ ಅವರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಎಲ್ಲಾ ಫಲಾನುಭವಿಗಳು ಕೋವಿಡ್ -19 ಲಸಿಕೆ ಪಡೆದು ಸರ್ಕಾರದ ಈ ಕಾರ್ಯವನ್ನು ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.

ಅದೇ ರೀತಿ ವ್ಯಾಕ್ಸಿನ್ ನೀಡುವ ಕಾರ್ಯದಲ್ಲಿ ನಿಯೋಜಿಸಲಾಗಿರುವ ವ್ಯಾಕ್ಸಿನೇಶನ್ ಅಧಿಕಾರಿಗಳು ತಪ್ಪದೇ ತಮಗೆ ವಹಿಸಿದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897 ರನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.