ಜಿಲ್ಲೆಯ ರೈಸ್ ಮಿಲ್ ಮಾಲೀಕರ ಚರ್ಚೆ

ಹೊನ್ನಾಳಿ.ಡಿ.೨೯; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್‌ನ ಹಳೆಯ ಬಾಕಿಯನ್ನು ಶೀಘ್ರವೇ ಪಾವತಿ ಮಾಡಬೇಕು ಎಂದು ಹೊನ್ನಾಳಿಯ ಶ್ರೀ ಮಂಜುನಾಥ ರೈಸ್ ಮಿಲ್ಸ್ ಮಾಲೀಕರಾದ ಎಚ್.ಎ. ಉಮಾಪತಿ ಅವರು ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ವಿನಂತಿಸಿದರು.ತಮ್ಮ ಇಲಾಖೆಗೆ ಸಂಬಂಧಿಸಿದಂತೆ  ದಾವಣಗೆರೆಗೆ ಆಗಮಿಸಿದ್ದ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಾರ್ಯದರ್ಶಿ ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.ಅನೇಕ ತಿಂಗಳುಗಳಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್‌ನ ಬಾಕಿ ಪಾವತಿಯಾಗದೇ ಉಳಿದಿದೆ. ಈ ಬಾಕಿ ಹಣವನ್ನು ಪಾವತಿ ಮಾಡಬೇಕು ಎಂಬುದು ಅಕ್ಕಿ ಗಿರಣಿ ಮಾಲೀಕರ ಮನವಿಯಾಗಿದೆ. 2020-21ನೇ ಸಾಲಿನ ರೈತರ ಭತ್ತ ಖರೀದಿ ಹಾಗೂ ಮಿಲ್ಲಿಂಗ್ ಅನ್ನು ಶೀಘ್ರವೇ ಪ್ರಾರಂಭಿಸುವಂತೆಯೂ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಾರ್ಯದರ್ಶಿ ಬಿ.ಎಚ್. ಅನಿಲ್‌ಕುಮಾರ್ ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು.ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈಸ್ ಮಿಲ್ ಮಾಲೀಕರ ಸಂಘದ ಮುಖಂಡ ಕೋಗುಂಡಿ ಬಕ್ಕೇಶಪ್ಪ, ರೈಸ್ ಮಿಲ್ ಮಾಲೀಕರಾದ ಚಂದ್ರಪ್ಪ, ಅನಿಲ್‌ಕುಮಾರ್ ಉಪಸ್ಥಿತರಿದ್ದರು.