ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿಯೂ ಬಸವ ಕೇಂದ್ರದಿಂದ ಶರಣಸಂಗಮ ಕಾರ್ಯಕ್ರಮ

ಚಾಮರಾಜನಗರ, ನ.14:- ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿಯು ಸಹ ಬಸವಣ್ಣ ಹಾಗೂ ಶರಣರ ವಿಚಾರಧಾರೆಗಳನ್ನು ತಿಳಿಸಿ ಸಮಾಜವನ್ನು ಜಾಗೃತಿ ಗೊಳಿಸುವ ನಿಟ್ಟಿನಲ್ಲಿ ಶರಣ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಬಸವ ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಎನ್‍ರಿಎಚ್ ಮಹದೇವಸ್ವಾಮಿ ತಿಳಿಸಿದರು.
ಜಿಲ್ಲೆಯ ಯಳಂದೂರು ತಾಲೂಕಿನ ಕಾರಾಪುರ ಮಠದಲ್ಲಿ ಇಂದು ನಡೆದ ಬಸವ ಕೇಂದ್ರ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಬಸವ ಕೇಂದ್ರ ಈಗಾಗಲೇ ರಚನೆ ಗೊಂಡು ಕಾರ್ಯನಿರ್ವಹಣೆ ಮಾಡುತ್ತಿದೆ. ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಬಸವ ಕೇಂದ್ರವನ್ನು ವಿಸ್ತರಣೆ ಮಾಡಿ, ಜಿಲ್ಲಾ ಸಮಿತಿ, ಐದು ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಆಯಾ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಶರಣ ಸಂಗಮ ಕಾರ್ಯಕ್ರಮ ಆಯೋಜನೆ, ಬಸವ ಜಯಂತಿಯನ್ನು ಅದ್ದೂರಿಯಾಗಿ ಅಚರಣೆ ಮಾಡುವ ಜೊತೆಗೆ ಯುವ ಜನಾಂಗದಲ್ಲಿ ಬಸವಣ್ಣ ಮತ್ತು ಶರಣ ವಿಚಾರಧಾರೆಗಳ ಬಗ್ಗೆ ಜಾಗೃತಿ ಗೊಳಿಸಿ ಬಸವ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಸಮಾಜವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಸಭೆಯಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಪ್ರಚುರ ಪಡಿಸುವಲ್ಲಿ ಜಿಲ್ಲಾ ಬಸವ ಕೇಂದ್ರವು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಬಳಿಕ ಸಭೆಯಲ್ಲಿ ಗುಂಡ್ಲುಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಶ್ಯಾನಡ್ರಾಳ್ಳಿ ಮಲ್ಲಿಕಾರ್ಜುನಸ್ವಾಮಿ ಅವರನ್ನು, ಯಳಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಹೊನ್ನೂರಿನ ಮಂಜು ಅವರನ್ನು ನೇಮಕ ಮಾಡಿ, ಶಾಲು ಹೊದಿಸಿ ಅಭಿನಂದಿಸಲಾಯಿತು.
ಸಂತೆಮರಳ್ಳಿ ಪೆÇಲೀಸ್ ಜಯಪ್ಪ ಅವರು ಇಲಾಖೆಯಲ್ಲಿ ಮುಂಬಡ್ತಿ ಹೊಂದಿದ್ದಕ್ಕಾಗಿ ಅವರನ್ನು ಜಿಲ್ಲಾ ಬಸವ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹೊನ್ನೂರು ಪರಮೇಶ್ವರ, ಗೌರವಾಧ್ಯಕ್ಷÀ ಕೊಡಸೋಗೆ ಶಿವಬಸಪ್ಪ ನಿಕಟ ಪೂರ್ವ ಅಧ್ಯಕ್ಷ ಸಂತೆಮರಳ್ಳಿ ವೇದಮೂರ್ತಿ, ಕೊಳ್ಳೇಗಾಲ ತಾಲ್ಲೂಕು ಘಟಕದ ಅಧ್ಯಕ್ಷ ಧನಗೆರೆ ಗುರುಸ್ವಾಮಿ, ಹನೂರು ತಾಲೂಕು ಘಟಕದ ಅಧ್ಯಕ್ಷ ಕಣ್ಣು ವೃಷಭೇಂದ್ರಸ್ವಾಮಿ, ನಿರ್ದೇಶಕಿ ಶೋಭಾ ಸಿದ್ದರಾಜು, ಮುಖಂಡರಾದ ಮಹದೇವಸ್ವಾಮಿ, ದುಗ್ಗಟ್ಟಿ ರಾಜೇಶ್, ದೊಡ್ಡರಾಯಪೇಟೆ ಗಿರೀಶ್, ಕಾರಾಪುರ ಮಠದ ಶಶಿಧರ್, ತಾ.ಪಂ. ಮಾಜಿ ಉಪಾಧ್ಯಕ್ಷ ರವೀಶ್, ದೊಡ್ಡಿಂದವಾಡಿ ವೀರಭದ್ರಸ್ವಾಮಿ, ಒಡೆಯರ್ ಪಾಳ್ಯದ ಸಿದ್ದಲಿಂಗಸ್ವಾಮಿ, ಕೊಳ್ಳೇಗಾಲದ ಬಿಂದು ಲೋಕೇಶ್, ಹೊಸೂರು ಮಹೇಶ್, ಜೆಎಸ್‍ಬಿ ಪ್ರತಿμÁ್ಠನದ ಶಶಿಕುಮಾರ್, ಜಿಲ್ಲೆಯ ಎಲ್ಲ ಘಟಕಗಳ ಪದಾಧಿಕಾರಿಗಳು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.