ಜಿಲ್ಲೆಯ ಪತ್ರಕರ್ತರಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ: ಡಾ.ಸಚೀನ ಗುದಗೆ ಒ.ಸಿ.ಟಿ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ: ಡಾ.ನಿತೀನ ಗುದಗೆ

ಬೀದರ್:ಫೆ.16: ಒ.ಸಿ.ಟಿ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ನಮ್ಮಲ್ಲಿ ಲಭ್ಯವಿದೆ ಎಂದು ಖ್ಯಾತ ಹೃದಯರೋಗ ತಜ್ಞರಾದ ಡಾ.ನಿತೀನ ಗುದಗೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇಡೀ ಕಲ್ಯಾಣ ಕರ್ನಾಟಕದಲ್ಲಿಯೇ ಈ ಸೇವೆ ನಮ್ಮಲ್ಲಿ ಮಾತ್ರ ಲಭ್ಯವಿದ್ದು, ಓರ್ವ ಸ್ಥಳಿಯ ಹಾಗೂ ಹುಲಸೂರನ ಹೃದಯ ಸಂಬಂಧಿ ಕಾಯಿಲೆಯುಳ್ಳ ವ್ಯಕ್ತಿಗೆ ಬಿ.ಪಿ.ಎಲ್ ಕಾರ್ಡ್ ಇರುವ ಕಾರಣ ಉಚಿತ ಚಿಕಿತ್ಸೆ ನೀಡಲಾಗಿದೆ. ಆ ಯಂತ್ರ ಖರಿದಿಸುವುದು ತುಂಬ ದೂಬಾರಿ ವೆಚ್ಚವಾದ್ದರಿಂದ ಅಂತಹ ರೋಗಿಗಳು ಕಂಡು ಬಂದರೆ ಮಾತ್ರ ಆಗಿಂದಾಗೆ ಒ.ಸಿ.ಟಿ ಅಳವಡಿಸಿ ಚಿಕಿತ್ಸೆ ನೀಡಲಾಗುವುದು. ಅದೊಂದು ಸುಕ್ಷ್ಮ ಕ್ಯಾಮೆರಾದಂತಹ ಯಂತ್ರೋಪಕರಣವಿದ್ದು, ಅದರ ಸಹಾಯದಿಂದ ರೋಗಿಗೆ ಸ್ಟಂಟ್ ಅಳವಡಿಸಿರುವುದರ ಬಗ್ಗೆ ವಿಡಿಯೋ ಮೂಲಕ ಖಚಿತ ಮಾಹಿತಿ ನೀಡುತ್ತದೆ ಎಂದರು.
ಗುದಗೆ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಸಚೀನ ಗುದಗೆ ಈ ಸಂದರ್ಭದಲ್ಲಿ ಮಾತನಾಡಿ, ನಮ್ಮಲ್ಲಿ ಶೀಘ್ರದಲ್ಲಿಯೇ ಬೈಪಾಸ್ ಸರ್ಜರಿಗೆ ಯೋಜನೆ ಸಿದ್ದಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಅದು ಕಾರ್ಯಾರಂಭ ಆಗಲಿದೆ. ಇದರಿಂದ ಈ ಭಾಗದ ಹೃದಯಸಂಬಂಧಿ ರೋಗಿಗಳು ಹೈದ್ರಾಬಾದ್, ಸೋಲಾಪುರ, ಬೆಂಗಳೂರಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮೂರಕ್ಕಿಂತ ಹೆಚ್ಚು ಬ್ಲಾಕೆಜ್ ಇದ್ದರೆ ಬೈಪಾಸ್ ಸರ್ಜರಿ ಅನಿವಾರ್ಯ ಇರುತ್ತದೆ. ಇದು ಸಹ ಇಡೀ ಕಲ್ಯಾಣ ಕರ್ನಾಟಕದಲ್ಲಿಯೇ ಮಾತ್ರ ನಮ್ಮಲ್ಲಿ ಲಭ್ಯವಿರಲಿದೆ ಎಂದು ಹೇಳಿದರು.
ಜಿಲ್ಲೆಯ ಪತ್ರಕರ್ತರಿಗೆ ಉಚಿತ ಹೃದಯ ಸಂಬಮಧಿ ಚಿಕಿತ್ದೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಕ್ರಡಿಟೆಶನ್ ಹೊಂದಿರುವ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯತ್ವ ಪಡೆದ ಪತ್ರಕರ್ತರಿಗೆ ಮಾತ್ರ ನಮ್ಮಲ್ಲಿ ಹೃದಯ ಸಂಬಮಧಿ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಸಚೀನ ಸ್ಪಷ್ಟಪಡಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿಗಳು, ಸರ್ಕಾರಿ ನೌಕರರು, ಅಗ್ನಿಶಾಮಕ ನೌಕರರು, ಪೋಲಿಸರು ಸೇರಿದಂತೆ ವಿವಿಧ 18 ಇಲಾಖೆಗಳ ಸಿಬ್ಬಂದಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಬಡ ರೋಗಿಗಳಿಗೆ ಬಿ.ಪಿ.ಎಲ್ ಕಾರ್ಡ್, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಹಾಗೂ ಯಶಸ್ವಿನಿ ಕಾರ್ಡ್ ಹೊಂದಿದವರಿಗೆ ನಮ್ಮಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದೆಂದು ಡಾ.ಸಚೀನ ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಕಾಂತ ಗುದಗೆ ಮಾತನಾಡಿ, ನಮ್ಮಲ್ಲಿ ಬಡವರಿಗೆ ಹೃದಯ ಸಂಬಮಧಿ ಕಾಯಿಲೆಗಳಿಗೆ ಒಳ್ಳೆಯ ಹಾಗೂ ಉಚಿತ ಚಿಕಿತ್ಸೆ ನೀಡಿದ ಪ್ರತಿಫಲವಾಗಿ ನಮ್ಮ ಆಸ್ಪ[ತ್ರೆಗೆ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಅಚಿವಮೆಂಟ್ ಆವಾರ್ಡ್‍ನ್ನು ರಾಜ್ಯ ಸರ್ಕಾರ ನೀಡಿರುತ್ತದೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ಮುಂದೆಯೂ ಸಹ ಜಿಲ್ಲೆಯ ಸಾರ್ವಜನಿಕರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತೇವೆ ಎಂದು ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು.